ಸಾಮಾಗ್ರಿಗಳು
ಮಾವಿನ ಪೀಸ್ಗಳು – ಅರ್ಧ ಕಪ್
ಶೇಂಗಾ – 3 ಟೀಸ್ಪೂನ್
ಹಸಿ ಮೆಣಸಿನಕಾಯಿ – 7
ಜೀರಿಗೆ – ಅರ್ಧ ಟೀಸ್ಪೂನ್
ಬೆಳ್ಳುಳ್ಳಿ ಎಸಳು – 7
ಉಪ್ಪು – ರುಚಿಗೆ ತಕ್ಕಷ್ಟು
ತೆಂಗಿನಕಾಯಿ ತುರಿ – 200 ಗ್ರಾಂ
ಕೊತ್ತಂಬರಿ ಸೊಪ್ಪು – 1 ಕಟ್ಟು
ಮಾಡುವ ವಿಧಾನ
ಮಧ್ಯಮ ಗಾತ್ರದ ಮಾವಿನಕಾಯಿ ತೆಗೆದುಕೊಂಡು ಸ್ವಚ್ಛವಾಗಿ ತೊಳೆದು ಸಣ್ಣ ಪೀಸ್ಗಳಾಗಿ ಕಟ್ ಮಾಡಿಕೊಳ್ಳಬೇಕಾಗುತ್ತದೆ. ಅಳತೆಗೆ ಅನುಗುಣವಾಗಿ ಕತ್ತರಿಸಿದ ಪೀಸ್ಗಳನ್ನು ಒಂದು ಬೌಲ್ನಲ್ಲಿ ತೆಗೆದುಕೊಂಡು ಪಕ್ಕಕ್ಕೆ ಇಡಬೇಕಾಗುತ್ತದೆ.
ಒಲೆ ಆನ್ ಮಾಡಿ ಅದರ ಮೇಲೆ ಪ್ಯಾನ್ ಇಡಿ, ಶೇಂಗಾವನ್ನು ಸಣ್ಣ ಉರಿಯಲ್ಲಿ ಹುರಿದು ಒಲೆ ಆಫ್ ಮಾಡಿ. ಈಗ ಹಸಿ ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಎಸಳು ಮತ್ತು ಉಪ್ಪನ್ನು ಮಿಕ್ಸರ್ ಜಾರ್‌ಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಹಸಿ ತೆಂಗಿನಕಾಯಿ ತುರಿದುಕೊಂಡು, ಕೊತ್ತಂಬರಿ ಸೊಪ್ಪು ಮತ್ತು ಕಾಂಡಗಳನ್ನು ಸೇರಿಸಿ, ಸ್ವಲ್ಪ ನೀರು ಹಾಕಿ, ತುಂಬಾ ನುಣ್ಣಗೆ ಅಲ್ಲದೇ ಒರಟಾಗಿ ರುಬ್ಬಿಕೊಳ್ಳಿ. ಅಂತಿಮವಾಗಿ ಅರ್ಧ ಕಪ್ ಕತ್ತರಿಸಿದ ಮಾವಿನ ತುಂಡುಗಳನ್ನು ಸೇರಿಸಿ ರುಬ್ಬಿಕೊಳ್ಳಿ.
ಇದೀಗ ನಾವು ಈ ಚಟ್ನಿಗೆ ಬೇಕಾದ ಒಗ್ಗರಣೆ ರೆಡಿ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಒಲೆ ಆನ್ ಮಾಡಿ ಅದರ ಮೇಲೆ ಪ್ಯಾನ್ ಇಡಿ. ಅದರೊಳಗೆ ಎಣ್ಣೆ ಹಾಕಿ ಬಿಸಿ ಮಾಡಬೇಕಾಗುತ್ತದೆ.
ಎಣ್ಣೆ ಬಿಸಿಯಾದ ಬಳಿಕ, ಸಾಸಿವೆ, ಉದ್ದು, ಹೆಸರು ಬೇಳೆ ಮತ್ತು ಒಣ ಮೆಣಸಿನಕಾಯಿಗಳನ್ನು ಸೇರಿಸಿ ಹುರಿಯಿರಿ. ಹುಣಸೆಹಣ್ಣು ಬೆಂದ ನಂತರ, ಜೀರಿಗೆ, ಇಂಗು, ಶುಂಠಿ ಪೇಸ್ಟ್ ಮತ್ತು ಕರಿಬೇವು ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿಕೊಳ್ಳಬೇಕಾಗುತ್ತದೆ.
ಕೊನೆಗೆ ಅರಿಶಿನ ಸೇರಿಸಿ ಒಂದು ನಿಮಿಷದ ಬಳಿಕ ಒಲೆ ಆಫ್ ಮಾಡಿ. ಈ ಒಗ್ಗರಣೆ ಮಿಶ್ರಣವನ್ನು ಚಟ್ನಿಗೆ ಸೇರಿಸಿಕೊಳ್ಳಿ. ರುಚಿಕರವಾದ ಮಾವಿನ ಕೊಬ್ಬರಿ ಚಟ್ನಿ ಸವಿಯಲು ಸಿದ್ಧವಾಗಿದೆ.