ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಕ್ತ ಸಾಲಿನ ಸಂಪೂರ್ಣ ಬಜೆಟ್ ಮಂಡನೆ ಆರಂಭವಾಗಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಆನ್ಲೈನ್ ಪ್ಲಾಟ್ ಫಾರಂ ಕಾರ್ಮಿಕರಿಗೆ ಶ್ರಮ್ ಪೋರ್ಟ್‌ಲ್ ಆರಂಭ ಆಗಲಿದೆ. ಇದರಿಂದ 1 ಕೋಟಿ ಗಿಗ್ ವರ್ಕರ್ಗೆ ಅನುಕೂಲ ಆಗಲಿದೆ.
ಇನ್ನು ಪಿಎಂ ಸ್ವಾನಿಧಿ ಯೋಜನೆಯ ಅಡಿ ಬೀದಿ ಬದಿ ವ್ಯಾಪಾರಿಗಳಿಗೆ 30,000 ಮೌಲ್ಯದ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.