CSK-RCB ಟಿಕೆಟ್ಸ್​ ಗೆ ಸಿಕ್ಕಾಪಟ್ಟೆ​​​​​ ಡಿಮ್ಯಾಂಡ್: ಟಿಕೆಟ್ ​​ಗಾಗಿ ಬೇಡಿಕೆ ಇಟ್ಟ ಸ್ಟಾರ್ ಆಟಗಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ 2024ರ 17 ನೇ ಆವೃತ್ತಿಗೆ ಕೇವಲ ಮೂರು ದಿನಗಳು ಉಳಿದಿವೆ. ಪಂದ್ಯಾವಳಿಯು ಮಾರ್ಚ್ 22 ರಂದು ಪ್ರಾರಂಭವಾಗಲಿದ್ದು ಪ್ರತಿಸ್ಪರ್ಧಿಗಳಾದ RCB ಮತ್ತು CSK ಮೊದಲ ಪಂದ್ಯ ಆಡಲಿದ್ದು. ಐಪಿಎಲ್ ಗೆ ಭರ್ಜರಿ ಓಪನಿಂಗ್ ಸಿಗ್ತಿದೆ.

ಈ ಪಂದ್ಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು. ಎರಡೂ ತಂಡಗಳ ಅಭಿಮಾನಿಗಳು ಈಗಾಗಲೇ ಈ ಪಂದ್ಯಕ್ಕಾಗಿ ದುಬಾರಿ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದು. ಭಾರತದ ಅನುಭವಿ ಆಫ್ ಸ್ಪಿನ್ನರ್ ಮತ್ತು ಮಾಜಿ ಸಿಎಸ್‌ಕೆ ಆಟಗಾರ ರವಿಚಂದ್ರನ್ ಅಶ್ವಿನ್ ಕೂಡ ಈ ರೋಚಕ ಪಂದ್ಯಕ್ಕೆ ಟಿಕೆಟ್ ಪಡೆಯಲು ಸಹಾಯವನ್ನು ಕೋರಿದ್ದಾರೆ.

ಅಶ್ವಿನ್ ತಮ್ಮ ಟ್ವಿಟ್ಟರ್ ಖಾತೆ X ನಲ್ಲಿ ಈ ಟಿಕೆಟ್‌ಗಳನ್ನು ವಿನಂತಿಸಿದ್ದಾರೆ. “ನನ್ನ ಮಕ್ಕಳಿಬ್ಬರೂ IPL 2024 ರ ಆರಂಭಿಕ ಪಂದ್ಯವನ್ನು ವೀಕ್ಷಿಸಲು ಬಯಸುತ್ತಾರೆ. ಆದರೆ ನಮಗೆ ಟಿಕೆಟ್ ಸಿಗಲಿಲ್ಲ ಎಂದು ಬರೆದು ಕೊಂಡಿದ್ದಾರೆ, ನಾನು ನನ್ನ ಮಕ್ಕಳ ಆಸೆಗಳನ್ನು ಪೂರೈಸಲು ಬಯಸುತ್ತೇನೆ, ಟಿಕೆಟ್ ನೀಡಬಹುದೇ? ಎಂದು ಅಶ್ವಿನ್ ಸಹಾಯ ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!