ಕೋವಿಡ್‌ ಉಲ್ಬಣದ ನಡುವೆ ಚೀನಾದಲ್ಲಿ ಹೆಚ್ಚುತ್ತಿದೆ ಭಾರತೀಯ ಜೆನರಿಕ್‌ ಔಷಧಗಳ ಬೇಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶೂನ್ಯ ಕೋವಿಡ್‌ ನೀತಿಗಳನು ತೆರವುಗೊಳಿಸಿದ ಬೆನ್ನಲ್ಲೇ ಚೀನಾದಲ್ಲಿ ಕೋವಿಡ್‌ ಉಲ್ಬಣಗೊಂಡಿದ್ದು ಅಗತ್ಯ ಔಷಧ ಸಾಮಗ್ರಿಗಳು ಸಮರ್ಪಕವಾಗಿ ಸಿಗದೇ ಜನರು ಪರದಾಡುತ್ತಿದ್ದಾರೆ. ಇದರ ನಡುವೆಯೇ ಭಾರತೀಯ ಜನರಿಕ್‌ ಔಷಧಗಳಿಗೆ ಚೀನಾದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಚೀನಾದ ತಜ್ಞರು ಈ ಔಷಧಿಗಳ ನಕಲಿ ಆವೃತ್ತಿಗಳು ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿವೆ ಎಂದು ಎಚ್ಚರಿಸಿದ್ದಾರೆ.

ಕೋವಿಡ್‌ ಚಿಕಿತ್ಸೆಗೆ ಬಳಸುವ ಫೈಜರ್‌ನ ಪ್ಯಾಕ್ಸ್‌ಲೋವಿಡ್ ಮಾತ್ರೆಗಳನ್ನು ಚೀನಾದ ರಾಷ್ಟ್ರೀಯ ಆರೋಗ್ಯ ಭದ್ರತಾ ಆಡಳಿತವು ಬಹಿಷ್ಕರಿಸಿದ್ದು ಹೀಗಾಗಿ ಇದರ ಭಾರತೀಯ ಆವೃತ್ತಿಗಳಿಗೆ ಚೀನಾದಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ಯಾಕ್ಸ್‌ಲೋವಿಡ್‌ನ ಭಾರೀ ಕೊರತೆಯಿಂದಾಗಿ, ಚೀನೀ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಭಾರತೀಯ ಜೆನೆರಿಕ್ ಆವೃತ್ತಿಗಳನ್ನು ಚೀನಿಯರು ಭಾರೀ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಉತ್ಪಾದಿಸಲಾದ ಜೆನರಿಕ್‌ ಆವೃತ್ತಿಗಳಾದ ಪ್ರಿಮೊವಿರ್, ಪ್ಯಾಕ್ಸಿಸ್ಟಾ, ಮೊಲ್ನುನಾಟ್ ಮತ್ತು ಮೊಲ್ನಾಟ್ರಿಸ್ ಗಳನ್ನು ಹೆಚ್ಚಾಗಿ ತರಿಸಿಕೊಳ್ಳಲಾಗುತ್ತಿದೆ. ಎಲ್ಲಾ ನಾಲ್ಕು ಔಷಧಿಗಳನ್ನು ಭಾರತೀಯ ಅಧಿಕಾರಿಗಳು ತುರ್ತು ಬಳಕೆಗಾಗಿ ಅನುಮೋದಿಸಿದ್ದಾರೆ. ಆದರೆ ಚೀನಾದಲ್ಲಿ ಇದರ ಬಳಕೆ ಕಾನೂನುಬದ್ಧವಾಗಿಲ್ಲ. ಆದರೆ ಜನರೇ ಈ ಔಷಧಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಬೀಜಿಂಗ್ ಮೆಮೋರಿಯಲ್ ಫಾರ್ಮಾಸ್ಯುಟಿಕಲ್‌ನ ಮುಖ್ಯಸ್ಥ ಕ್ಸಿಯಾಬಿಂಗ್ “ಉತ್ತಮ ಪರಿಣಾಮಗಳೊಂದಿಗೆ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಕೋವಿಡ್ ಔಷಧಗಳನ್ನುನಾವು ಕೇವಲ ಭಾರತದಿಂದ ಮಾತ್ರ ಪಡೆಯಲು ಸಾಧ್ಯ” ಎಂದು ಹೇಳಿದ್ದಾರೆ.

ನಾಗರಿಕರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಉಭಯ ದೇಶಗಳ ನಡುವಿನ ಬೃಹತ್ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ತನ್ನ ಫಾರ್ಮಾ ಉತ್ಪನ್ನಗಳಿಗೆ ಅನುಮತಿ ನೀಡುವಂತೆ ಭಾರತವು ಚೀನಾವನ್ನು ಮನವೊಲಿಸಲು ಯತ್ನಿಸುತ್ತಿದೆ. ಇದರಿಂದ ಭಾರತೀಯ ಔಷಧಿಗಳ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!