ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆ ವಿಧಾನಸೌಧ ಎದುರಿಗೆ ಸ್ಥಾಪಿಸಲು ಆಗ್ರಹ

ಹೊಸದಿಗಂತ ವರದಿ, ಹುಬ್ಬಳ್ಳಿ:
ಚಾಲುಕ್ಯ ರಾಜಧಾನಿಯ ಕನ್ನಡ‌ ಚಕ್ರವರ್ತಿ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ಬಾದಾಮಿಯ ಹಾಗೂ ಬೆಂಗಳೂರು ವಿಧಾನಸೌಧ ಎದುರಿಗೆ ಸ್ಥಾಪಿಸಬೇಕು ಎಂದು ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಕೆ. ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬಾದಾಮಿ ಚಾಲುಕ್ಯರ ಪ್ರಸಿದ್ಧ ರಾಜ ಇಮ್ಮಡಿ ಪುಲಿಕೇಶಿ ಸಾಹಸ ಮನೆ ಮನೆಗೆ ತಲುಪಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಈಗಾಗಲೇ 13 ಜಿಲ್ಲೆಯಲ್ಲಿ ಜಾಗೃತ ಅಭಿಯಾನ ಯಶಸ್ವಿಯಾಗಿದೆ. ಪ್ರತಿಮೆ ಸ್ಥಾಪನೆಗೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಅವರ ಮೂಲಕ ಮನವಿ ಸಲ್ಲಿಸಲಾಗಿದೆ. ನವೆಂಬರ್ 30 ರಂದು ಬಾದಾಮಿಯಲ್ಲಿ ಬೃಹತ್ ಅಭಿಯಾನ ಹಮ್ಮಿಕೊಂಡು ಇಮ್ಮಡಿ ಪುಲಕೇಶಿಯ ಸಾಹಸ ಜಾಗೃತಿ ಮೂಡಿಸಿ ಅಲ್ಲಿಯೂ ಸಹ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇಮ್ಮಡಿ ಪುಲೀಕೆಶ ಕಲೆ, ಸಂಸ್ಕೃತಿಯನ್ನು ಸಾರಿದ್ದಾರೆ. ಉತ್ತರ ಭಾರತದ ಸಾಮ್ರಾಟ ನೆನಪಿಸುವ ಕಾರ್ಯ ಮಾಡುತ್ತಿದೆ. 11 ಕ್ಕೂ ಹೆಚ್ಚು ಸಾಹಿತಿಗಳು ಸಹಕಾರ ನೀಡಿದ್ದಾರೆ. ಕನ್ನಡಿಗರ ಭಾವನಾತ್ಮಕ ಸಂಬಂಧ ಜೋಡಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು. ರಾಜ್ಯ ಉಪಾಧ್ಯಕ್ಷ ದೇವನಹಳ್ಳಿ ದೇವರಾಜ, ರಾಜ್ಯ ಸಮಿತಿಯ ಸದಸ್ಯ ಸಿ. ಶಿವಪ್ಪ ಚಿಕ್ಕಬಳ್ಳಾಪುರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!