ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶಿಕ್ಷಕಿಯೊಬ್ಬರ ಪೆನ್ಷನ್ ಗೆ ಸಂಬಂಧ ಪಟ್ಟ ದಾಖಲೆಗಳಿಗೆ ಸಹಿ ಹಾಕಲು ಲಂಚ ಸ್ವೀಕರಿಸುತ್ತಿದ್ದ ಶಾಲಾ ಸಂಚಾಲಕಿಯೊಬ್ಬರು ದಕ್ಷಿಣ ಕನ್ನಡ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಬಜಪೆ ಸಮೀಪದ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನ ಕ್ಕೆ ಸೇರಿದ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ .
ಶಾಲೆಯ ಶಿಕ್ಷಕಿ ಶೋಭರಾಣಿ ನಿವೃತ್ತಿಯಾಗುತ್ತಿದ್ದು, ಶಿಕ್ಷಕಿಯ ಪೆನ್ಷನ್ ಮಂಜೂರಾತಿಗೆ ಅಗತ್ಯವಾಗಿದ್ದ ದಾಖಲೆಯೊಂದಕ್ಕೆ ಸಹಿ ಹಾಕಲು ಸಂಚಾಲಕಿ ಜ್ಯೋತಿ ಪೂಜಾರಿ ಎಂಬವರು 20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಪೈಕಿ 5 ಲಕ್ಷ ಹಣವನ್ನು ಶಿಕ್ಷಕಿಯಿಂದ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಶೋಭರಾಣಿ ಶಿಕ್ಷಕಿಯಾಗಿ, ಮುಖ್ಯಶಿಕ್ಷಕಿಯಾಗಿ 42 ವರ್ಷ ಸೇವೆ ಸಲ್ಲಿಸಿದ್ದು ಜುಲೈ 31 ರಂದು ನಿವೃತ್ತಿಯಾಗಳಿದ್ದರು.
ಪೆನ್ಷನ್ ಗೆ ಸಂಬಂಧ ಪಟ್ಟ ಪಟ್ಟ ದಾಖಲೆಗಳಿಗೆ ಸಹಿ ಹಾಕಲು 20 ಲಕ್ಷ ಬೇಡಿಕೆ ಇಟ್ಟಿದ್ದು, ಅದರಲ್ಲಿ 5 ಲಕ್ಷ ಹಣವನ್ನು ಶಾಲೆಯ ಕಚೇರಿಯಾದ ಸಂಚಾಲಕರ ವಾಸದ ಮನೆಯಲ್ಲಿ ಜ್ಯೋತಿ ಪೂಜಾರಿಯವರಿಗೆ ನೀಡುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಜ್ಯೋತಿ ಪೂಜಾರಿಯವರನ್ನು ಬಂಧಿಸಿದ್ದಾರೆ.
ದ.ಕ.ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಎ. ಸೈಮನ್, ಉಪ ಅಧಿಕ್ಷಕರುಗಳಾದ ಚಲುವರಾಜ್, ಕಲಾವತಿ ಮತ್ತು ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.