ದಿನಭವಿಷ್ಯ| ಉದ್ಯೋಗ ಕ್ಷೇತ್ರದಲ್ಲಿ ಅನವಶ್ಯ ವಾಗ್ವಾದಕ್ಕೆ ಹೋಗಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕಾರ್ಯಕ್ಕೆ ಅಡ್ಡಿ ಒದಗಿದರೂ ಹಿಡಿದ ಕೆಲಸ ಬಿಡಬೇಡಿ. ಅಂತ್ಯದಲ್ಲಿ ಎಲ್ಲವೂ ಸುಸೂತ್ರವಾಗಲಿದೆ. ಮನೆಯ ಪರಿಸರ ಹರ್ಷದಾಯಕ.

ವೃಷಭ
ಪ್ರೀತಿಯನ್ನು ಹುಡುಕುತ್ತಾ ಹೋಗದಿರಿ. ಅದು ತಾನಾಗಿ ನಿಮಗೆ ಸಿಗುತ್ತದೆ. ಈ ಮಾತು ನಿಮಗಿಂದು ಅನ್ವಯ. ಬಂಧುಗಳ ಸಹಕಾರ.

ಮಿಥುನ
ವೃತ್ತಿಯಲ್ಲಿ ರಿಸ್ಕ್ ತೆಗೆದುಕೊಳ್ಳುವ ಸಾಹಸಕ್ಕೆ ಹೋಗದಿರಿ. ಅದು ಪ್ರತಿಕೂಲವಾದೀತು. ಕೌಟುಂಬಿಕ ಭಿನ್ನಮತ, ನೆಮ್ಮದಿ ಹಾಳು.

ಕಟಕ
ಉದ್ಯೋಗ ಕ್ಷೇತ್ರದಲ್ಲಿ ಅನವಶ್ಯ ವಾಗ್ವಾದಕ್ಕೆ ಹೋಗಬೇಡಿ. ಹಣಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ. ಕೌಟುಂಬಿಕ ಬೇಡಿಕೆ ಹೆಚ್ಚಬಹುದು.

ಸಿಂಹ
ಮನೆಯ ಖರ್ಚು ಹೆಚ್ಚುವುದು. ಮಿತ ವ್ಯಯ ಸಾಧಿಸುವುದು ಒಳಿತು. ಕುಟುಂಬಸ್ಥರ ಜತೆಗಿನ ಸಂಬಂಧದಲ್ಲಿ ಗುಣಾತ್ಮಕ ಬದಲಾವಣೆ. ವೃತ್ತಿಯಲ್ಲಿ ಯಶಸ್ಸು.

ಕನ್ಯಾ
ನಿಮ್ಮ ಮನಸ್ಸು ಕೆಡಿಸುವಂತಹ ವ್ಯಕ್ತಿಗಳಿಂದ ದೂರವಿರಿ. ಅವರ ಪ್ರಭಾವಕ್ಕೆ ಸಿಲುಕದಿರಿ.  ವೃತ್ತಿಯಲ್ಲಿ ಫಲಪ್ರದ ಬೆಳವಣಿಗೆ. ಆರ್ಥಿಕ ಉನ್ನತಿ.

ತುಲಾ
ಕಚೇರಿ ಮತ್ತು ಮನೆಯಲ್ಲಿ ನಿಮಗೆ ಅನುಕೂಲಕರ ವಾತಾವರಣ. ಕಾರ್ಯಸಿದ್ಧಿ. ವ್ಯವಹಾರಸ್ಥರಿಗೆ ಲಾಭ. ಆರೋಗ್ಯ ಸುಸ್ಥಿರ.

ವೃಶ್ಚಿಕ
ಕೌಟುಂಬಿಕ ಬೆಳವಣಿಗೆ ನಿಮ್ಮ ನೆಮ್ಮದಿ ಕೆಡಿಸಬಹುದು. ಆದರೆ ನೀವು ತಿಳಿದುಕೊಂಡಷ್ಟು ಗಂಭೀರ ಬಿಕ್ಕಟ್ಟು ಇದಲ್ಲ. ಸುಲಭದಲ್ಲಿ ಪರಿಸ್ಥಿತಿ ಸಹಜವಾಗಲಿದೆ.

ಧನು
ಸಮತೋಲಿತ ಮನಸ್ಥಿತಿ. ಹಾಗಾಗಿ ವೃತ್ತಿಯಲ್ಲಾಗಲಿ, ಮನೆಯಲ್ಲಾಗಲಿ  ಪರಿಸ್ಥಿತಿ ನಿಭಾಯಿಸಲು ಕಷ್ಟವಾಗದು. ಉತ್ತಮ ಸಹಕಾರ ಲಭ್ಯ.

ಮಕರ
ನಿಮ್ಮ ಆಪ್ತರ ಹಿತಾಸಕ್ತಿ ಕುರಿತಂತೆ ಚಿಂತಿತರಾಗುವ ಪ್ರಸಂಗ ಒದಗಬಹುದು. ಅವರಿಗೆ ನಿಮ್ಮ ನೆರವಿನ ಅಗತ್ಯ ಬೀಳಬಹುದು. ತಾಳ್ಮೆಯಿಂದ ವರ್ತಿಸಿ.

ಕುಂಭ
ಸೂಕ್ಷ್ಮ ವಿಚಾರಗಳಲ್ಲಿ ನಿಮ್ಮ ಮನಸ್ಸಿನ ಮಾತು ಕೇಳಿ. ಇತರರ ಮಾತು ಕೇಳಬೇಡಿ. ಕೆಲವರ ವರ್ತನೆ ನೋವು ತಂದರೂ ಅದನ್ನು ಕಡೆಗಣಿಸಿ.

ಮೀನ
ಫಲಪ್ರದ ದಿನ. ಆರ್ಥಿಕ ಲಾಭ. ಆಪ್ತರ ಸಂಗದಲ್ಲಿ ದಿನ ಕಳೆಯುವ ಅವಕಾಶ. ಆರೋಗ್ಯಕ್ಕೆ ಸಂಬಂಧಿಸಿದ ಕಳವಳ ನಿವಾರಣೆ. ಒಟ್ಟಿನಲ್ಲಿ ನಿರಾಳ ದಿನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!