ಹೊಸದಿಗಂತ ವರದಿ,ಯಾದಗಿರಿ :
ಅಂಗನವಾಡಿ ಸಹಾಯಕಿಯ ಗೈರು ಹಾಜರಾತಿ ಸಕ್ರಮಗೊಳಿಸಲು ಒಂದು ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ ಸಿಡಿಪಿಓ ವನಜಾಕ್ಷಿ ಅವರು ಇಂದು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ಗೈರು ಹಾಜರಿ ಸಕ್ರಮಗೊಳಿಸಿ ವೇತನ ಬಿಡುಗಡೆ ಮಾಡಲು ಸಿಡಿಪಿಓ ಅವರು ಒಂದು ಲಕ್ಷ ರೂ. ವರೆಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ನಗರದ ಯಾದಗಿರಿ ಬಸ್ ನಿಲ್ದಾಣದ ಬಳಿ 80 ಸಾವಿರ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಿದ್ದಾಳೆ.
ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಹೆಚ್. ಇನದಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಪಿಐ ಸಿದ್ದರಾಯ, ಸಂಗಮೇಶ ಹಾಗೂ ಇತರ ಲೋಕಾಯುಕ್ತ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.