ದಿಗಂತ ವರದಿ ಹುಬ್ಬಳ್ಳಿ:
ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಕರ್ನಾಟಕ ಗೃಹ ಮಂಡಳಿ ಅಮರಗೋಳ 2 ನೇ ಹಂತ ( ಜಡ್ಜ ಕಾಲನಿ) ನಿವಾಸಿಗಳು ಹಿತಾಭಿವೃದ್ಧಿ ಸಂಘ ನಗರದ ಗೃಹ ಮಂಡಳಿ ಎದುರು ಶುಕ್ರವಾರ ಪ್ರತಿಭಟನೆ ಮಾಡಿದರು.
ಬೇಕೆ ಬೇಕು ನೀರು ಬೇಕು. ಮೂಲಸೌಕರ್ಯವಾದ ನೀರು ಇಲ್ಲದೆ ನಾವು ಬದುಕುತ್ತಿದ್ದೇವೆ. ಬೇಕೆ ಬೇಕು ನೀರು ಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಕಳೆದ ಆರು ತಿಂಗಳಿನಿಂದ ನಮ್ಮ ಕಾಲನಿಯಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ಇಲ್ಲಿಯ ನಿವಾಸಿಗಳು ಸಮಸ್ಯೆ ಎದುರಾಗಿದೆ. ಹಲವಾರು ಬಾರಿ ಮನವಿಸಲ್ಲಿಸಿದರು ಅಧಿಕಾರಿಗಳು ಕಿವಿಗೂಡುತ್ತಿಲ್ಲ. ನೀರು ಇಲ್ಲದೆ ಹೇಗೆ ಬದುಕಬೇಕು ಎಂದು ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶರಣಬಸಪ್ಪ ರೋಣ ಮಾತನಾಡಿ, ಸುಮಾರು ಏಳು ವರ್ಷದಿಂದ ಈ ಕಾಲನಿಯಲ್ಲಿ ವಾಸಿಸುತ್ತಿದ್ದೇವೆ. ಆದರೆ ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿಲ್ಲ.
ಉಪಾಧ್ಯಕ್ಷ ಸುಭಾಸ ನಾಯನೇಗಲಿ, ಕಾರ್ಯದರ್ಶಿ ಮೃತ್ಯಂಜಯ ಮಟ್ಟಿ, ವಿರೇಶ ಅಪ್ಪಣ್ಣವರ, ಸುರೇಶ ಚವ್ಹಾನ, ಛಾಯಾ ದೇಶಪಾಂಡೆ, ವೈಶಾಲಿ ಹಾಳಕೇರಿ, ವಿಜಯಲಕ್ಷ್ಮಿ ಹುದ್ದಾರೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.