ಹರ್ಷ ಹತ್ಯೆ ಆರೋಪಿಗಳನ್ನು ಎನ್‌ಕೌಂಟರ್ ಮಾಡುವಂತೆ ಹಿಂದೂ ಪರಿಷತ್ ಆಗ್ರಹ

ದಿಗಂತ ವರದಿ ಹುಬ್ಬಳ್ಳಿ:

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಮಾಡಿದ ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು ಆಗ್ರಹಿಸಿ ಹಿಂದೂ ಪರಿಷತ್ ನಗರದ ಸಂಗೊಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಸರ್ಕಾರ ಹತ್ಯೆ ಮಾಡಿದ ಆರೋಪಿಗಳ ಮೇಲೆ ಮೃದು ದೋರಣೆ ಸಲ್ಲಿಸುತ್ತಿದೆ. ಆದರಿಂದ ಸರ್ಕಾರದ ಈ ನಡೆ ಖಂಡಿಸಿ ಪ್ರತಿಭಟನಾಕಾರರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿಂದೂ ಪರಿಷತ್ ರಾಜ್ಯ ಪ್ರಮುಖ ಗಣೇಶ ಕದಂ ಮಾತನಾಡಿ, ಹತ್ಯೆ ಮಾಡಿದ ಆರೋಪಿಗಳನ್ನು ಕಠಿಣ ಶಿಕ್ಷೆ ನೀಡಬೇಕಾದ ಸರ್ಕಾರ ಅವರ ಮೇಲೆ ಕರುಣೆ ತೋರುತ್ತಿದೆ. ಇಲ್ಲಿಯ ವರೆಗೂ ೩೦ ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತ ಹತ್ಯೆ ಮಾಡಿದರು ಶಿಕ್ಷೆಗೆ ಮಾತ್ರ ಒಳಪಟ್ಟಿದ್ದಾರೆ. ಆದರೆ ಶಿಕ್ಷೆಯಾದ ನಂತರ ಹೊರ ಬಂದು ಇಂತಹ ಕೃತ್ಯವನ್ನು ಮಾಡುತ್ತಿದ್ದಾರೆ. ಆದರಿಂದ ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ವಿನಾಯಕ ಮಾಳದಕರ, ಜಿಲ್ಲಾ ಉಪಾಧ್ಯಕ್ಷ ವಿಜಯ ಮಾಮರಡಿ, ನಗರಾಧ್ಯಕ್ಷ ಸಿದ್ದು ರಾಯಣಾಳ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!