ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಹದಿಂದಾಗಿ ತತ್ತರಿಸಿರುವ ದೆಹಲಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ನೀರಿನ ಹರಿವು ಹೆಚ್ಚಾದಂತೆ ರೋಗಗಳು ಹೆಚ್ಚಾಗಿದ್ದು, ಡೆಂಗ್ಯೂ ಹಾಗೂ ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗಿದೆ.
ಹವಾಮಾನ ಬದಲಾವಣೆ ಹಾಗೂ ಅಲ್ಲಲ್ಲಿ ನೀರು ನಿಂತಿದ್ದು ಜ್ವರ ಶೀತ ಸಾಮಾನ್ಯವಾಗಿ ಕಾಣಿಸುತ್ತಿದೆ, ಅದರಲ್ಲಿ ಹೆಚ್ಚಿನ ಕೇಸ್ ಡೆಂಗ್ಯೂ ಆಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪ್ರತಿನಿತ್ಯವೂ ಜ್ವರ, ತಲೆನೋವು, ಮೈಕೈನೋವು, ಆಯಾಸ, ವಾಂತಿ ಹೊಟ್ಟು ನೋವು ಸಮಸ್ಯೆಯಿಂದಾಗಿ ಸಾಕಷ್ಟು ಮಂದಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಹೆಚ್ಚಿನವರಿಗೆ ಡೆಂಗ್ಯೂ ಸಮಸ್ಯೆ ಎದುರಾಗಿದೆ. ಈವರೆಗೂ 136 ಡೆಂಗ್ಯೂ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿದೆ.