ಅಮೆಜಾನ್‌ ಯಡವಟ್ಟು: ತಪ್ಪಾಗಿದ್ದಕ್ಕೆ ಮಹಿಳೆ ಬಳಿ ಕ್ಷಮೆಯಾಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆನ್ಲೈನ್‌ ಆರ್ಡರ್‌ಗಳಿಂದ ಸದಾ ಜಾಗರೂಕರಾಗಿರಬೇಕೆಂದು ತಿಳಿದಿದ್ದರೂ ಯಾವಾರುವುದು ಮಾತ್ರ ಕಡಿಮೆಯಾಗುತ್ತಿಲ್ಲ. ಪ್ರತಿದಿನ ಒಂದಿಲ್ಲೊಂದು ಮೋಸದ ಜಾಲ ಪತ್ತೆಯಾಗುತ್ತಿದ್ದರೂ ಜನ ಆನ್ಲೈನ್‌ನಿಂದ ತರಿಸುವ ಖಯಾಲಿ ಮಾತ್ರ ಬಿಡೋದಿಲ್ಲ. ಅದರಂತೆಯೇ ಓರ್ವ ಮಹಿಳೆ ಆಪಲ್‌ ವಾಚ್‌ ಆರ್ಡರ್‌ ಮಾಡಿದ್ರೆ ಬಂದಿದ್ದು, ನಕಲಿ ವಾಚ್.‌ ಇದೀಗ ಈ ಗಟನೆ ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.

50,900ರೂಪಾಯಿ ಮೌಲ್ಯದ ಆಪಲ್‌ ವಾಚ್‌ ಬರುವ ಜಾಗದಲ್ಲಿ ನಕಲಿ ವಾಚಗ ಕಂಡು ಮಹಿಳೆ ಗಾವರಿಯಾಗಿದ್ದಾರೆ. ಹೇಗೆ ವಂಚನೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸನಯಾ ಎಂಬ ಮಹಿಳೆ ತಾನು ಆರ್ಡರ್ ಮಾಡಿದ ಆಪಲ್ ವಾಚ್‌ನ ವಿವರಗಳನ್ನು ತನ್ನ ಟ್ವಿಟರ್ ಖಾತೆಯಲ್ಲಿ (@Sarcaswari) ಹಂಚಿಕೊಂಡಿದ್ದಾರೆ. ಆಕೆ ರೂ.50,900 ಕ್ಕೆ Apple Watch Series 8 ಅನ್ನು ಆರ್ಡರ್ ಮಾಡಿದ್ದು, ಆಪಲ್ ವಾಚ್ ಬದಲಿಗೆ ‘ಫಿಟ್ ಲೈಫ್’ ವಾಚ್ ಅನ್ನು ಜುಲೈ 9ರಂದು ನನಗೆ ಕೊಟ್ಟು ಹೋಗಿದ್ದಾರೆ. ಅಮೆಜಾನ್‌ಗೆ ಈ ವಿಷಯದ ಬಗ್ಗೆ ದೂರು ನೀಡಿದರೆ ಮರುಪಾವತಿ ಅಥವಾ ವಿನಿಮಯವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಬೇಕಾಬಿಟ್ಟಿ ವರ್ತಿಸಿದ್ದಾಗಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, “ಅಮೆಜಾನ್‌ನಿಂದ ಎಂದಿಗೂ ಆರ್ಡರ್ ಮಾಡಬೇಡಿ..Amazon ಈ ಸಮಸ್ಯೆಯನ್ನು ಪರಿಹರಿಸಿಲ್ಲ,” ಎಂದು Amazon ಸಹಾಯವಾಣಿ ಟ್ಯಾಗ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಆಕೆಯ ಟ್ವೀಟ್‌ಗೆ ಅಮೆಜಾನ್ ಹೆಲ್ಪ್ ಪ್ರತಿಕ್ರಿಯಿಸಿ ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದೆ. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ನೆಟಿಜನ್‌ಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ದುಬಾರಿ ಗ್ಯಾಜೆಟ್‌ಗಳನ್ನು ಆರ್ಡರ್ ಮಾಡದಂತೆ ಆಕೆಗೆ ಸಲಹೆ ನೀಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!