ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಹಾವಳಿ, ಈವರೆಗೂ ಏಳು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಉಲ್ಬಣವಾಗಿದ್ದು, ಈವರೆಗೂ ಏಳು ಮಂದಿ ಮೃತಪಟ್ಟಿದ್ದಾರೆ. ಕಳೆದ ಮೂರು ತಿಂಗಳಿನಿಂದ ಡೆಂಗ್ಯೂ ಪ್ರಕರಣಗಳ ದಾಖಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡೆಂಗ್ಯೂಯಿಂದ ಸಾವು ಸಂಭವಿಸಿದೆ ಎನ್ನಲಾಗಿದೆ.

ಈವರೆಗೂ ಡೆಂಗ್ಯೂ ರೋಗಕ್ಕೆ ತುತ್ತಾದವರು ದಿನಗಳ ನಂತರ ಗುಣಮುಖರಾಗಿದ್ದಾರೆ. ಇದೇ ಮೊದಲ ಬಾರಿಗೆ ಡೆಂಗ್ಯೂನಿಂದ ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ವರ್ಷದಲ್ಲಿ ಸೆಪ್ಟೆಂಬರ್‌ವರೆಗೆ ಬೆಂಗಳೂರಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆಗಸ್ಟ್‌ನಲ್ಲಿ ಡೆಂಗ್ಯೂ ಉಲ್ಬಣವಾಗಿದ್ದು, ಅರ್ಧದಷ್ಟು ಪ್ರಕರಣಗಳು ಒಂದೇ ತಿಂಗಳಿನಲ್ಲಿ ಪತ್ತೆಯಾಗಿವೆ.

ಇನ್ನು ಮಳೆ ಆರಂಭವಾದರೆ ಡೆಂಗ್ಯೂ ಸಂಖ್ಯೆ ಹೆಚ್ಚಾಗಲಿದೆ. ಸುತ್ತಮುತ್ತಲ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಲು ಬಿಬಿಎಂಪಿ ಮನವಿ ಮಾಡಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!