SHOCKING | ರಾಜ್ಯದಲ್ಲಿ ಡೆಂಗ್ಯೂ ಶೇ. 60 ರಷ್ಟು ಏರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಸದ್ದಿಲ್ಲದೇ ಡೆಂಗ್ಯೂ ಹೆಚ್ಚಾಗಿದ್ದು, ಒಟ್ಟಾರೆ ಶೇ.60 ರಷ್ಟು ಏರಿಕೆ ಕಂಡಿದೆ.

ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2023ಕ್ಕೆ ಹೋಲಿಸಿದರೆ ಈ ವರ್ಷದ ಮೊದಲಾರ್ಧದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಶೇ.60 ರಷ್ಟು ಏರಿಕೆಯಾಗಿದೆ. 2023ರ ಜೂನ್​ನಲ್ಲಿ ಒಟ್ಟು 2,003 ಪ್ರಕರಣಗಳು ವರದಿಯಾಗಿದ್ದವು. ಆದರೆ, ಈ ವರ್ಷ ಜೂನ್​ನಲ್ಲಿ​ 4886 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,230 ಜನರಿಗೆ ಡೆಂಗ್ಯೂ ಬಂದಿದೆ.

ರಾಜ್ಯದಲ್ಲಿ 7 ಸಾವಿರಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಬಂದಿದೆ. ಅದರಲ್ಲೂ ರಾಜಧಾನಿಯಲ್ಲಿ ಕಳೆದ ತಿಂಗಳು ಮೇನಲ್ಲಿ 727 ಇದ್ದ ಡೆಂಗ್ಯೂ ಪ್ರಕರಣಗಳು ಕಳೆದ 20 ದಿನಗಳಲ್ಲಿ 1230 ಪ್ರಕರಣಗಳು ವರದಿಯಾಗಿವೆ. ಜೂನ್ ತಿಂಗಳಿನಲ್ಲಿಯೇ ಡೆಂಗ್ಯೂ ಸಂಖ್ಯೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಜನವರಿಯಿಂದ ನಿನ್ನೆಯವರೆಗೆ ( ಜೂ.24) ವರೆಗೆ 2457 ಕೇಸ್ ಪತ್ತೆಯಾಗಿವೆ. ರಾಜ್ಯದಲ್ಲಿ ಜನವರಿಯಿಂದ ಜೂನ್20 ರವರೆಗೆ ಒಟ್ಟು 7343 ಕೇಸ್ ಪತ್ತೆಯಾಗಿವೆ. ಈ ಮೂಲಕ ಶೇ 60ರಷ್ಟು ಡೆಂಗ್ಯೂ ಪ್ರಕರಣಗಳು ಏರಿಕೆ ಕಂಡಿವೆ.

ಡೆಂಗ್ಯೂ ಮೊದಲ ಲಕ್ಷಣಗಳೇನು?
ಹೊಟ್ಟೆನೋವು, ಅತಿಯಾದ ಅಥವಾ ಮೈಲ್ಡ್
ವಾಂತಿಯಾಗುವುದು
ಮೂಗು ಅಥವಾ ಒಸಡಿನಿಂದ ರಕ್ತ ಸುರಿಯುವುದು
ಯುರಿನ್ ಅಥವಾ ಮಲದಲ್ಲಿ ರಕ್ತ ಕಾಣುವುದು
ಚರ್ಮದಲ್ಲಿ ಗಾಯ, ಹೊಡೆತ ಬಿದ್ದಂತೆ ಕಾಣಿಸುವುದು
ಮಾಮೂಲಾಗಿ ಉಸಿರಾಡಲು ಆಗದೇ ಇರುವುದು
ಸುಸ್ತು, ಬೇಧಿ
ಇರಿಟೇಟ್ ಆಗುವುದು, ರೆಸ್ಟ್‌ಲೆಸ್‌ನೆಸ್

ಗಂಭೀರ ಲಕ್ಷಣಗಳು
ಅತಿಯಾದ ಹೊಟ್ಟೆ ನೋವು
ಉಸಿರಾಟಕ್ಕೆ ತುಂಬಾ ಕಷ್ಟ ಎನಿಸುವುದು
ಅತಿಸಾರ ವಾಂತಿ ನಿಲ್ಲದೇ ಇರುವುದು
ಮೂಗಿನಿಂದ ರಕ್ತ ಸುರಿಯುವುದು

ಯಾವುದೇ ಲಕ್ಷಣಗಳು ಕಾಣಿಸಿದರೂ ಕೂಡಲೇ ವೈದ್ಯರನ್ನು ಸಂಪರ್ಕಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!