ಚುನಾವಣೆಗೆ ಟಿಕೆಟ್ ನಿರಾಕರಣೆ: ಕೋಪಗೊಂಡು ಟವರ್ ಹತ್ತಿದ ಮಾಜಿ ಕೌನ್ಸಿಲರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದರಿಂದ ಮಾಜಿ ಎಎಪಿ ಕೌನ್ಸಿಲರ್ ಟ್ರಾನ್ಸ್‌ ಮಿಷನ್ ಟವರ್ ಹತ್ತಿದ ಘಟನೆ ನಡೆದಿದೆ.

ಟಿಕೆಟ್‌ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆಪ್‌ ಮಾಜಿ ಕೌನ್ಸಿಲರ್‌ ಹಸೀಬ್‌ ಉಲ್‌ ಹಸನ್‌,  ಭಾನುವಾರ ಶಾಸ್ತ್ರಿ ಪಾರ್ಕ್‌ ಮೆಟ್ರೊ ನಿಲ್ದಾಣದ ಬಳಿಯ ಟ್ರಾನ್ಸ್‌ಮಿಷನ್‌ ಟವರ್‌ ಏರಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಪರಿಸ್ಥಿತಿಯನ್ನು ನಿಯಂತ್ರಿಸಿ,  ಹಸೀಬ್ ಮನವೊಲಿಸಿ ಕೆಳಗಿಳಿಸಲು ಪ್ರಯತ್ನ ನಡೆಸಿದ್ದಾರೆ.
ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ಗೆ ಡಿಸೆಂಬರ್ 4 ರಂದು ನಡೆಯಲಿರುವ ಚುನಾವಣೆಗೆ ಆಮ್ ಆದ್ಮಿ ಪಕ್ಷವು ತನ್ನ 117 ಅಭ್ಯರ್ಥಿಗಳ ಎರಡನೇ ಮತ್ತು ಅಂತಿಮ ಪಟ್ಟಿಯನ್ನು ಶನಿವಾರ ಪ್ರಕಟಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!