Friday, February 3, 2023

Latest Posts

ದೆಹಲಿಯಲ್ಲಿ ದಟ್ಟ ಮಂಜು: 100ಕ್ಕೂ ಹೆಚ್ಚು ವಿಮಾನಗಳು ವಿಳಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, 100ಕ್ಕೂ ಹೆಚ್ಚು ವಿಮಾನಗಳು ತಡವಾಗಿದೆ. ಇನ್ನು ಎರಡು ವಿಮಾನಗಳು ಮಾರ್ಗ ಬದಲಿಸಿ ಹಾರಾಡಿವೆ.

ದಟ್ಟ ಮಂಜಿನ ಕಾರಣ ವಿಮಾನ ಸಂಚಾರ ಅಸಾಧ್ಯವಾಗಿದ್ದು, ಗಂಟೆಗಳ ವರೆಗೆ ಮಂಜು ಕಡಿಮೆಯಾಗಲು ವಿಮಾನ ನಿಲ್ದಾಣದ ಅಧಿಕಾರಿಗಳು ಕಾದಿದ್ದಾರೆ. ಏರ್‌ಪೋರ್ಟ್‌ನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದ ಪ್ರಯಾಣಿಕರು ಎಲ್ಲೆಡೆ ಕಾಣುತ್ತಿದ್ದರು.

ರಾತ್ರಿ ದೃಷ್ಟಿ ಸಾಮರ್ಥ್ಯ ಕೇವಲ 200ಮೀಟರ್‌ಗೆ ಕುಸಿದಿದ್ದು, ವಿಮಾನ ಹಾರಾಟದ ವೇಳೆ ಬದಲಾವಣೆ ಮಾಡಲಾಗಿದೆ. ರಾತ್ರಿ 11:45ಕ್ಕೆ ಬರಬೇಕಿದ್ದ ಸ್ಪೇಸ್‌ಜೆಟ್ ವಿಮಾನ ಹಾಗೂ ಬೆಳಗ್ಗೆ 2:15 ಇಳಿಯಬೇಕಿದ್ದ ಇಂಡಿಗೋ ವಿಮಾನವನ್ನು ಜೈಪುರ್‌ಗೆ ಕಳುಹಿಸಲಾಗಿದೆ.

ಈ ಎರಡೂ ವಿಮಾನಗಳ ಪೈಲಟ್ ರನ್‌ವೇ ಗುರುತಿಸಲು ಆಗುತ್ತಿಲ್ಲ ಎಂದು ಹೇಳಿದ್ದರು. ಹತ್ತಿರವೇ ಇದ್ದ ಜೈಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನಗಳು ಹಾರಾಡಲು ಕನಿಷ್ಠ 125 ಮೀಟರ್‌ಗಳ ವಿಸಿಬಲಿಟಿ ಕಡ್ಡಾಯ. ಹಾಗಾಗಿ ವಿಮಾನಗಳು ವಿಳಂಬವಾಗಿವೆ. ಇನ್ನೂ ಎರಡು ದಿನ ದೆಹಲಿಯಲ್ಲಿ ದಟ್ಟ ಮಂಜು ಇರಲಿದ್ದು, ಉಳಿದ ವಿಮಾನಗಳು ತಡವಾಗುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!