ಶವರ್ಮ ಮೇಲೆ ಮತ್ತೆ ಆಹಾರ ಸುರಕ್ಷತಾ ಇಲಾಖೆ ಹದ್ದಿನಕಣ್ಣು: ಕೇರಳದಲ್ಲಿ 502 ಮಳಿಗೆಗಳ ಮೇಲೆ ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಆಹಾರ ಸುರಕ್ಷತಾ ಇಲಾಖೆ ಮತ್ತೆ ಫೀಲ್ಡ್‌ಗೆ ಇಳಿದಿದ್ದು, ರಾಜ್ಯಾದ್ಯಂತ 43 ತಂಡಗಳ ನೇತೃತ್ವದಲ್ಲಿ 502 ಶವರ್ಮಾ ವ್ಯಾಪಾರ ಮಳಿಗೆಗಳಿಗೆ ದಾಳಿ ನಡೆಸಿ ತಪಾಸಣೆ ನಡೆಸಿದೆ.
ಇದೇ ಸಂದರ್ಭ ಸೂಕ್ತ ಮಾನದಂಡ ಪಾಲಿಸದ 54 ಮಳಿಗೆಗಳಲ್ಲಿ ಶವರ್ಮಾ ತಯಾರಿ ಹಾಗೂ ಮಾರಾಟಕ್ಕೆ ನಿಷೇಧ ವಿಧಿಸಿದೆ. ಇನ್ನು 88 ಮಳಿಗೆಗಳಿಗೆ ನೋಟಿಸ್ ಹಾಗೂ 61 ಮಳಿಗೆಗಳಿಗೆ ತಿದ್ದುಪಡಿ ನೋಟಿಸ್ ಜಾರಿ ಮಾಡಲಾಗಿದೆ.
ನೈರ್ಮಲ್ಯ ಪಾಲಿಸದೆ ಕಲುಷಿತ ವಾತಾವರಣದಲ್ಲಿ ಶವರ್ಮಾ ತಯಾರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೇಸಿಗೆ ಹಿನ್ನೆಲೆಯಲ್ಲಿ ಆಹಾರ ತಯಾರಿಕಾ ಘಟಕಗಳ ಮೇಲೆ ನಿಗಾ ಹೆಚ್ಚಿಸಲಾಗಿದೆ. ಇನ್ನಷ್ಟು ವಿಶೇಷ ಪರೀಕ್ಷೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸಚಿವೆ ವೀಣಾ ಜಾರ್ಜ್ ಇದೇ ಸಂದರ್ಭ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!