ತೆಲಂಗಾಣ ವಿಧಾನಸಭಾ ಚುನಾವಣೆ: ನಕ್ಸಲ್‌ ಪ್ರಾಬಲ್ಯ ಪ್ರದೇಶಗಳಲ್ಲಿ ಕೇಂದ್ರ ಪಡೆಗಳ ಹದ್ದಿನ ಕಣ್ಗಾವಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನದ ಪರ್ವ ಸಮೀಪಿಸುತ್ತಿದ್ದಂತೆ, ನಕ್ಸಲರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಕೇಂದ್ರ ಭದ್ರತಾ ಪಡೆಗಳು ಫೀಲ್ಡಿಗಿಳಿದಿವೆ. ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಕೇಂದ್ರ ಅರೆಸೇನಾ ಪಡೆಗಳೊಂದಿಗೆ ಕ್ವಿಕ್ ರಿಯಾಕ್ಷನ್ ತಂಡಗಳನ್ನು ನಿಯೋಜಿಸಲಾಗಿದೆ.

ಡ್ರೋನ್ ಕ್ಯಾಮೆರಾಗಳ ಕಣ್ಗಾವಲು

ನವೆಂಬರ್ 30 ರಂದು ನಡೆಯಲಿರುವ ಮತದಾನದ ವೇಳೆ ಕೇಂದ್ರ ಪಡೆಗಳು ಮತ್ತು ತೆಲಂಗಾಣ ಪೊಲೀಸರು ಜಂಟಿಯಾಗಿ ಸಶಸ್ತ್ರ ನಿಯೋಜನೆಯನ್ನು ಯೋಜಿಸಿದ್ದಾರೆ. ಮುಲುಗು, ಜಯಶಂಕರ್ ಭೂಪಾಲಪಲ್ಲಿ, ರಾಮಗುಂಡಂ, ಮಹಬೂಬಾಬಾದ್, ಅದಿಲಾಬಾದ್, ರಾಮಗುಂಡಂ, ನಿರ್ಮಲ್, ಭದ್ರಾಚಲಂ, ಕೊತಗುಡೆಂ ಮತ್ತು ಇಲ್ಲಂಡು ಮುಂತಾದ ನಕ್ಸಲ್ ಪೀಡಿತ ಪ್ರದೇಶಗಳ 614 ಮತಗಟ್ಟೆಗಳನ್ನು ಸಮಸ್ಯಾತ್ಮಕ ಎಂದು ಗುರುತಿಸಲಾಗಿದ್ದು, ಡ್ರೋನ್‌ ಕಣ್ಗಾವಲಿನಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಕೇಂದ್ರ ಪಡೆಗಳ ಕ್ಷೇತ್ರ ಪ್ರವೇಶ

23,000 ಅಸ್ಸಾಂ ರೈಫಲ್ಸ್, ಸಿಆರ್‌ಪಿಎಫ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಸಶಸ್ತ್ರ ಸೀಮಾಬಲ್, ಬಿಎಸ್‌ಎಫ್ ಮತ್ತು ಸಿಐಎಸ್‌ಎಫ್ ಪಡೆಗಳನ್ನು ತೆಲಂಗಾಣಕ್ಕೆ ನಿಯೋಜಿಸಲಾಗಿದೆ. ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದ ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ತೀವ್ರ ತಪಾಸಣೆ ನಡೆಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!