ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಐಐಟಿಯ ವಿದ್ಯಾರ್ಥಿಯೊಬ್ಬ ವೇಟ್ ಲಿಫ್ಟಿಂಗ್ ರಾಡ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
23 ವರ್ಷದ ವಿದ್ಯಾರ್ಥಿ ಪಣವ್ ಜೈನ್ ವಿವೇಕ್ ವಿಹಾರದಲ್ಲಿರುವ ತನ್ನ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನನ್ನು ಮನೆಯಲ್ಲಿ ಬಿಟ್ಟು ತಂದೆ ತಾಯಿ ವಾಕಿಂಗ್ಗೆ ತೆರಳಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವೇಟ್ ಲಿಫ್ಟಿಂಗ್ ರಾಡ್ಗೆ ತಾಯಿಯ ವೇಲ್ ಹಾಕಿ ಅದನ್ನು ನೇಣಿನಂತೆ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಖಿನ್ನತೆಯೇ ಸಾವಿಗೆ ಕಾರಣ ಎನ್ನಲಾಗಿದೆ.
ಕೆಲವು ದಿನಗಳಿಂದ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದ, ಖಿನ್ನತೆಗೆ ಚಿಕಿತ್ಸೆ ಪಡೆಯುತ್ತ ಎನ್ನಲಾಗಿದೆ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.