ಹೊಸದಿಗಂತ ಕಲಬುರಗಿ:
ನಗರದ ಹೊರವಲಯದ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಬೆಳ್ಳಂಬೆಳಗ್ಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಿದರು.
ಕೇಂದ್ರ ಕಾರಾಗೃಹದ ಪ್ರತಿಯೊಂದು ಸೆಲ್, ಬ್ಯಾರಕ್ ಗಳನ್ನು ಪರಿಶೀಲನೆ ಮಾಡಿದ ಉಪ ಲೋಕಾಯುಕ್ತರು ಅಡುಗೆ ಕೋಣೆಗೆ ತೆರಳಿ ಊಟದ ಗುಣಮಟ್ಟತೆಯನ್ನು ಪರೀಕ್ಷೆ ನಡೆಸಿದರು.
ಈ ವೇಳೆ ಕಾರಾಗೃಹದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳೊಂದಿಗೆ ಸಮಾಲೋಚನೆ ನಡೆಸಿದ್ದು,ನಗರ ಪೋಲಿಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಕಾರಾಗೃಹದ ಸೂಪರಿಂಟೆಂಡೆಂಟ್ ಡಾ.ಅನಿತಾ ಜೊತೆಗಿದ್ದರು.