ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಘಾತದಲ್ಲಿ ಗಾಯಗೊಂಡು ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರೆ ಇತ್ತ ರುದ್ರಪ್ಪ ಲಮಾಣಿ ಪುತ್ರ ಸರ್ಕಾರಿ ಕಾರಲ್ಲಿ ಸುತ್ತಾಡುತ್ತಾ ದರ್ಬಾರ್ ನಡೆಸುತ್ತಿದ್ದಾರೆ.
ರುದ್ರಪ್ಪ ಲಮಾಣಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಪುತ್ರ ದರ್ಶನ್ ಲಮಾಣ ಬೆಂಗಳೂರಿನಿಂದ ಹಾವೇರಿಗೆಸರ್ಕಾರಿ ಕಾರಿನಲ್ಲಿ ಆಗಮಿಸಿದ್ದು, ಸರ್ಕಾರ ಡೆಪ್ಯೂಟಿ ಸ್ಪೀಕರ್ಗೆ ನೀಡಿರುವ ಕಾರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ದರ್ಶನ್ ಲಮಾಣಿ ತಮ್ಮ ಬೆಂಬಲಿಗರ ಜೊತೆ ನಗರ ಸಂಚಾರ ಮಾಡಿದ್ದು, ಕೆಎಂ05, ಜಿ6000 ನಂಬರಿನ ಸರ್ಕಾರಿ ವಾಹನದಲ್ಲಿ ಓಡಾಡುವ ಮೂಲಕ ದರ್ಬಾರ್ ನಡೆಸಿದ್ದಾರೆ. ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.