ನೇಪಾಳದ ಪ್ರಸಿದ್ಧ ಚುಕೌನಿ ರೆಸಿಪಿ ಒಂದು ರುಚಿಕರ ಮತ್ತು ಸರಳವಾದ ಖಾದ್ಯವಾಗಿದ್ದು, ಬಟಾಟೆ ಮತ್ತು ಮೊಸರಿನಿಂದ ತಯಾರಿಸಲಾಗುತ್ತದೆ. ಇದು ಮುಖ್ಯವಾಗಿ ನೇಪಾಳದ ಬೆಟ್ಟ ಪ್ರದೇಶದಲ್ಲಿ ಜನಪ್ರಿಯವಾಗಿದೆ.
ಬೇಕಾಗುವ ಪದಾರ್ಥಗಳು:
ಬಟಾಟೆ – 3 (ಮಧ್ಯಮ ಗಾತ್ರ)
ಮೊಸರು – 1 ಕಪ್
ಕಾಳು ಮೆಣಸು ಪುಡಿ – 1 ಚಮಚ
ಸಾಸಿವೆ – 1 ಚಮಚ
ಜೀರಿಗೆ – 1 ಚಮಚ
ಹಸಿರು ಮೆಣಸಿನಕಾಯಿ – 2
ಹಿಂಗ್ – 1 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 2 ಚಮಚ
ಮಾಡುವ ವಿಧಾನ:
ಮೊದಲು ಬಟಾಟೆಗಳನ್ನು ಬೇಯಿಸಿ ಸಣ್ಣ ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ.
ಈಗ ಒಂದು ಬೌಲ್ ನಲ್ಲಿ ಮೊಸರು ಹಾಕಿ ಗಂಟ್ಟಿಲ್ಲದಂತೆ ಚೆನ್ನಾಗಿ ಕಲಸಿ, ಅದಕ್ಕೆ ಉಪ್ಪು, ಪುಡಿ ಮಾಡಿದ ಕಾಳುಮೆಣಸು, ಮತ್ತು ತುಂಡು ಮಾಡಿದ ಬಟಾಟೆ ಹಾಕಿ ಮಿಕ್ಸ್ ಮಾಡಿ.
ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಅದರಲ್ಲಿ ಸಾಸಿವೆ, ಜೀರಿಗೆ, ಹಸಿರು ಮೆಣಸು, ಹಾಗೂ ಹಿಂಗು ಹಾಕಿ ಒಗ್ಗರಣೆ ಮಾಡಿ. ಈ ಒಗ್ಗರಣೆಯನ್ನು ಮೊಸರು-ಬಟಾಟೆ ಮಿಶ್ರಣದ ಮೇಲೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚುಕೌನಿ ರೆಡಿ. ಇದನ್ನು ಬಿಸಿ ಅನ್ನದೊಂದಿಗೆ ಸವಿಯಬಹುದು.