Wednesday, January 7, 2026

ಡೇರಾ ಮುಖ್ಯಸ್ಥನಿಗೆ ಮತ್ತೆ ಪೆರೋಲ್: 14 ದಿನಗಳ ಕಾಲ ಜೈಲಿನಿಂದ ಹೊರ ಬಂದ ರಾಮ್ ರಹೀಮ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಹರಿಯಾಣದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ ಮತ್ತೆ ಬಿಡುಗಡೆ ಭಾಗ್ಯ ಸಿಕ್ಕಿದೆ. 2017ರಲ್ಲಿ ಜೈಲು ಸೇರಿದ ಬಳಿಕ 15ನೇ ಬಾರಿಗೆ 40 ದಿನಗಳ ಅವದಿಗೆ ಪೆರೋಲ್ ದೊರಕಿದೆ.

ಇಂದು (ಜ.5) ರೋಹ್ಟಕ್‌ನಲ್ಲಿರುವ ಸುನಾರಿಯಾ ಜೈಲಿನಿಂದ ಹೊರಬಂದಿದ್ದು, ಈ ಅವಧಿಯಲ್ಲಿ ಸಿರ್ಸಾ ಪ್ರಧಾನ ಕಚೇರಿಯ ಡೇರಾದಲ್ಲಿಯೇ ಇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ 2025ರ ಆಗಸ್ಟ್ ತಿಂಗಳಲ್ಲಿ 40 ದಿನಗಳ ಕಾಲ 14ನೇ ಬಾರಿಗೆ ಪೆರೋಲ್ ನೀಡಲಾಗಿತ್ತು. ಅದಲ್ಲದೇ 2025ರ ಏಪ್ರಿಲ್‌ನಲ್ಲಿ 21 ದಿನ ಹಾಗೂ 2025ರ ಜನವರಿಯಲ್ಲಿ 30 ದಿನಗಳ ಕಾಲ ಪೆರೋಲ್ ನೀಡಲಾಗಿತ್ತು.

ಡೇರಾ ಸಚ್ಚಾ ಸೌದಾದಲ್ಲಿ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರಲ್ಲಿ ಆತನಿಗೆ 20 ವರ್ಷಗಳ ಶಿಕ್ಷೆ ವಿಧಿಸಿತ್ತು. 2019ರಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣದಲ್ಲೂ ರಾಮ್ ರಹಿಮ್ ಸೇರಿದಂತೆ ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

error: Content is protected !!