17 ಶಾಲೆಗಳ ಮಾನ್ಯತೆ ರದ್ದು, 3 ಕೆಳದರ್ಜೆಗೆ: CBSE ಯಿಂದ ಕಠಿಣ ಕ್ರಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಶುಕ್ರವಾರ ವಿವಿಧ ದುಷ್ಕೃತ್ಯಗಳನ್ನು ಮಾಡುತ್ತಿರುವ 17 ಶಾಲೆಗಳ ಮಾನ್ಯತೆ ರದ್ದುಗೊಳಿಸಿದೆ.ಜೊತೆಗೆ ಇನ್ನು 3 ಶಾಲೆಗಳನ್ನು ಕೆಳದರ್ಜೆಗೆ ಇಳಿಸಿದೆ.

ಸಂಯೋಜಿತವಲ್ಲದ ಶಾಲೆಗಳು ನಕಲಿ ವಿದ್ಯಾರ್ಥಿಗಳು, ಅನರ್ಹ ಅಭ್ಯರ್ಥಿಗಳನ್ನು ಪ್ರಸ್ತುತ ಪಡಿಸುತ್ತಿವೆ ಮತ್ತು ದಾಖಲೆಗಳನ್ನ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ.

ಸಿಬಿಎಸ್‌ಇ ಸಾಮಾಜಿಕ ಮಾಧ್ಯಮದಲ್ಲಿ ನೋಟಿಸ್ ಪೋಸ್ಟ್ ಮಾಡಿದ್ದು,ಈ ಶಾಲೆಗಳು ನಕಲಿ ವಿದ್ಯಾರ್ಥಿಗಳು, ಅನರ್ಹ ಅಭ್ಯರ್ಥಿಗಳನ್ನು ಪ್ರಸ್ತುತಪಡಿಸುವ ಮತ್ತು ದಾಖಲೆಗಳನ್ನ ಸರಿಯಾಗಿ ನಿರ್ವಹಿಸದ ವಿವಿಧ ದುಷ್ಕೃತ್ಯಗಳನ್ನು ಮಾಡುತ್ತಿರುವುದನ್ನು ಕಂಡುಕೊಂಡ ನಂತರ ಸಿಬಿಎಸ್‌ಇ 17 ಶಾಲೆಗಳನ್ನು ಅಮಾನತುಗೊಳಿಸಿದೆ, ಇನ್ನು 3 ಶಾಲೆಗಳನ್ನು ಕೆಳದರ್ಜೆಗೆ ಇಳಿಸಿದೆ” ಎಂದು ಬರೆದಿದೆ.

ಏತನ್ಮಧ್ಯೆ, ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ 2024ನ್ನ ಫೆಬ್ರವರಿ 15ರಿಂದ ಏಪ್ರಿಲ್ 2, 2024 ರವರೆಗೆ ನಡೆಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!