BIG NEWS | 40 ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದು, ಲಿಸ್ಟ್‌ನಲ್ಲಿವೆ ಇನ್ನೂ 100 ಕಾಲೇಜು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ವೈದ್ಯಕೀಯ ಆಯೋಗ ( NMC) ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸದ 40 ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ರದ್ದುಮಾಡಲಾಗಿದೆ.

ಒಂದೆರಡು ತಿಂಗಳ ಅವಧಿಯಲ್ಲಿ ಸುಮಾರು 40 ಕಾಲೇಜುಗಳ ಮಾನ್ಯತೆ ರದ್ದಾಗಿದ್ದು, 100 ಕ್ಕೂ ಹೆಚ್ಚು ಕಾಲೇಜುಗಳ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ.

ಗುಜರಾತ್, ಪುದುಚೆರಿ, ಅಸ್ಸಾಂ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಕಾಲೇಜುಗಳಲ್ಲಿ ಎನ್‌ಎಂಸಿ ನಿಗದಿಪಡಿಸಿದ ಮಾನದಂಡಗಳ ಪಾಲನೆಯಲ್ಲಿ ಲೋಪ ಕಂಡುಬಂದಿದೆ, ಇನ್ನೂ 100 ಕಾಲೇಜುಗಳು ಇದೇ ಕಾರಣದಿಂದ ಮಾನ್ಯತೆ ಕಳೆದುಕೊಳ್ಳುವ ಸಾಧ್ಯತೆಗಳಿವೆ.

100 ವರ್ಷಕ್ಕೂ ಹಳೆಯದಾದ ಅರುಣಾಚಲ ಪ್ರದೇಶದ ಪ್ರಮುಖ ವೈದ್ಯಕೀಯ ಕಾಲೇಜು ಕೂಡ ಮಾನ್ಯತೆ ಕಳೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!