ಹೊಸದಿಗಂತ ವರದಿ, ವಿಜಯಪುರ:
ಕರ್ತವ್ಯಲೋಪ ಹಿನ್ನೆಲೆ ವಿಜಯಪುರ ಡಿಡಿಪಿಐ ಎನ್.ಎಚ್. ನಾಗೂರ ಅಮಾನತುಗೊಂಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 2024-25ರಲ್ಲಿ ಹೊಸ ಶಾಲೆಯ ನೋಂದಣಿ ಪ್ರಕ್ರಿಯೆಲ್ಲಿ ನಿಯಮಬಾಹಿರ ಅನುಮೋದನೆ ನೀಡಿದ ಹಿನ್ನೆಲೆ, ಡಿಡಿಪಿಐ ನಾಗೂರ ವಿರುದ್ಧ ಶಿಸ್ತು ಕ್ರಮ ಬಾಕಿ ಇರಿಸಿ, ತಕ್ಷಣದಿಂದ ಅಮಾನತು ಮಾಡಲಾಗಿದೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಡಿಡಿಪಿಐ ನಾಗೂರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.