June 23, 2026
Tuesday, June 23, 2026
spot_img

ಡಿಕೆ ಶಿವಕುಮಾರ್‌ ವಿರುದ್ಧ ಅವಹೇಳನಾಕಾರಿ ಪೋಸ್ಟ್‌: ಫೇಸ್‌ಬುಕ್‌ ಖಾತೆಗಳ ವಿರುದ್ಧ ಎಫ್‌ಐಆರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಅವಹೇಳನಾಕಾರಿ ಪೋಸ್ಟ್‌ ಮಾಡಿದ್ದ ಫೇಸ್‌ಬುಕ್‌ ಖಾತೆಗಳ ನಿರ್ವಾಹಕದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜೂನ್ 20ರಂದು ವಕೀಲ ದೀಪು ಸಿ.ಆರ್. ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ. ಕುಮಾರಸ್ವಾಮಿ ಫಾರ್‌ ಸಿಎಂ ಹಾಗೂ ಜನತಾ ದಳ ಸೆಕ್ಯುಲರ್‌ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಿಂದ ಹಳೆಯ ಚಾಳಿ ಮತ್ತೆ ಆರಂಭ; ಹುಟ್ಟುಗುಣ ಸುಟ್ಟಲೂ ಹೋಗಲ್ಲ ಎನ್ನುವ ಕ್ಯಾಪ್ಷನ್‌ನಲ್ಲಿ ಸುಳ್ಳು ಮಾಹಿತಿ ಹಂಚಲಾಗಿದೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 192ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಫೇಸ್‌ಬುಕ್‌ ಖಾತೆ ನಿರ್ವಾಹಕರಿಗಾಗಿ ಹುಡುಕಾಟ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !