ಪ್ರಧಾನಿ ಮೋದಿ ವಿರುದ್ಧ ಬಿಜೆಪಿ ಶಾಸಕರ ಅವಹೇಳನಾಕಾರಿ ಮಾತು? ಆಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ವಿರುದ್ಧ ಅವಹೇಳನಾಕಾರಿ ಮಾತುಗಳಿರುವ ಕರ್ನಾಟಕ ಬಿಜೆಪಿ ಶಾಸಕರ ಧ್ವನಿ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ರಾಯಚೂರು ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ಹೆಸರಿನಲ್ಲಿರುವ ಆಡಿಯೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕನ್ನಡ ಹೋರಾಟಗಾರರ ಜತೆ ಮಾತನಾಡಿರುವ ಆಡಿಯೋ ಇದು ಎನ್ನಲಾಗಿದ್ದು, ಯಾವ ಮೋದಿಯೂ ಇಲ್ಲ ಪಾದಿಯೂ ಇಲ್ಲ ನಾನು ಒನ್ ಮ್ಯಾನ್ ಆರ್ಮಿ ಎಂದಿದ್ದಾರೆ.
ಯಾವ ಬದನೆಕಾಯಿ ಮಾತನ್ನೂ ನಾನು ಕೇಳೋದಿಲ್ಲ. ಮೋದಿ ರೈಟ್ ಹ್ಯಾಂಡ್ ಮಾತೇ ಕೇಳಲ್ಲ, ಇನ್ನೇನು, ನಾನು ಸಿಂಗಲ್ ಆರ್ಮಿ, ರೈಟ್ ಲೆಫ್ಸ್ ಯಾವುದೂ ಇಲ್ಲ. ನನಗೆ ನಾನೇ ಕೈ, ನಾನೇ ಕಾಲು, ನಾನೇ ಮೋದಿ, ನಾನೇ ಟ್ರಂಪ್ ಎಂದಿದ್ದಾರೆ.

ಮೊದಲಿನಿಂದ ನನ್ನ ಕ್ಷೇತ್ರಕ್ಕೆ ಯಾರಾದ್ರೂ ಲೀಡರ್‌ನ ಬನ್ನಿ ಬನ್ನಿ ಅಂತ ಕರೆದಿದ್ದೀನಾ? ನನಗೆ ಯಾರೂ ಇಲ್ಲ, ನಾನು ಸಿಂಗಲ್ ಆರ್ಮಿ. ಸೋತ್ರೂ ಗೆದ್ರೂ ತಲೆ ಕೆಡಿಸ್ಕೊಳೋದಿಲ್ಲ. ಜಗತ್ತಿನಲ್ಲಿ ಚಿಂತೆಯಿಲ್ಲದ ವ್ಯಕ್ತಿ ಅಂದ್ರೆ ನಾನೇ. ನಾನು ದೇವರು ಇದ್ದಂಗೆ. ನಮ್ ಹುಡುಗುರಿಗೆ ದಿನಾ ಹೇಳ್ತಿನಿ ನನ್ನ ಕಾಲಿಗೆ ಬೀಳ್ರೋ ಅಂತ. ದೈವದ ಹತ್ರ ನಾನು ಬರೆಸಿಕೊಳ್ಳಲ್ಲ. ನಾನೇ ದೈವ ಬರೀತಿನಿ. ಸೋಮಶೇಖರ್, ಶ್ರೀರಾಮುಲುಗು ನಾನ್ ಕೇರ್ ಮಾಡಲ್ಲ ಎಂದಿರುವ ಆಡಿಯೋ ವೈರಲ್ ಆಗಿದ್ದು, ಈವರೆಗೂ ಶಿವರಾಜ್ ಪಾಟೀಲ್ ಈ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!