ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಾಲಿವುಡ್ ಬಾದ್‌ಶಾ, ಕಿಂಗ್ ಖಾನ್ ಎಂಬೆಲ್ಲಾ ಬಿರುದುಗಳಿದ್ದರೂ ನಟ ಶಾರುಖ್ ಖಾನ್‌ಗೆ ರಾಷ್ಟ್ರಪ್ರಶಸ್ತಿ ಬಂದಿರೋದು ಇದೇ ಮೊದಲು!
33 ವರ್ಷಗಳಿಂದ ಶಾರುಖ್ ಖಾನ್ ಬಾಲಿವುಡ್‌ನಲ್ಲಿ ಬೇರೂರಿದ್ದಾರೆ. ಕೋಟ್ಯಂತರ ಫ್ಯಾನ್ಸ್, ಬಿರುದು ಗಳಿಸಿದರೂ, ಮನಮುಟ್ಟುವಂಥ ಸಿನಿಮಾಗಳನ್ನು ಮಾಡಿದ್ದರೂ ಈವರೆಗೂ ರಾಷ್ಟ್ರ ಪ್ರಶಸ್ತಿ ಸಿಕ್ಕಿರಲಿಲ್ಲ. ಇದೀಗ ಅಟ್ಲೀ ನಿರ್ದೇಶನದ ಜವಾನ್ ಸಿನಿಮಾಗೆ ಪ್ರಶಸ್ತಿ ಸಿಕ್ಕಿದೆ.
ಈ ಬಗ್ಗೆ ಅಟ್ಲೀ ಖುಷಿ ವ್ಯಕ್ತಪಡಿಸಿದ್ದಾರೆ. ಜವಾನ್ ಚಿತ್ರಕ್ಕಾಗಿ ನೀವು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಕ್ಕೆ ನನಗೆ ಸಂತೋಷವಾಗಿದೆ. ನಿಮ್ಮ ಪ್ರಯಾಣದ ಭಾಗವಾಗುವುದು ಭಾವನಾತ್ಮಕ ಮತ್ತು ರೋಮಾಂಚಕಾರಿಯಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಚಿತ್ರದಲ್ಲಿ ನಟಿಸಲು ಓಕೆ ಹೇಳಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್. ಇದು ನಿಮಗೆ ನನ್ನ ಮೊದಲ ಪ್ರೇಮ ಪತ್ರ… ಇನ್ನೂ ಹಲವು ಪತ್ರಗಳು ಬರಲಿವೆ ಎಂದಿದ್ದಾರೆ.