September 21, 2026
Monday, September 21, 2026
spot_img

Desserts | ಮೊಟ್ಟೆ ಇಲ್ಲ, ಓವನ್ ಬೇಕಿಲ್ಲ.. ಟ್ರೈ ಮಾಡಿ ಸೂಪರ್ ಟೇಸ್ಟಿ ಎಗ್ಲೆಸ್ ಕೊಕೊನಟ್ ಕೇಕ್!

ಮೈದಾ ಹಿಟ್ಟು

ತುರಿದ ತೆಂಗಿನಕಾಯಿ

ಸಕ್ಕರೆ ಪುಡಿ

ಮೊಸರು

ಹಾಲು

ಬೆಣ್ಣೆ

ಬೇಕಿಂಗ್ ಪೌಡರ್

ಬೇಕಿಂಗ್ ಸೋಡಾ

ವೆನಿಲ್ಲಾ ಎಸೆನ್ಸ್

ಮೊದಲು ಒಂದು ಬೌಲ್‌ನಲ್ಲಿ ಮೊಸರು, ಸಕ್ಕರೆ ಪುಡಿ ಮತ್ತು ಬೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸಕ್ಕರೆ ಕರಗಬೇಕು. ಈಗ ಅದಕ್ಕೆ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಜರಡಿ ಹಿಡಿದು ಹಾಕಿ. ಆಮೇಲೆ ತುರಿದ ತೆಂಗಿನಕಾಯಿ,ವೆನಿಲ್ಲಾ ಎಸೆನ್ಸ್ ಹಾಗೂ ಸ್ವಲ್ಪ ಸ್ವಲ್ಪ ಹಾಲು ಸೇರಿಸುತ್ತಾ ಗಂಟಿಲ್ಲದಂತೆ ಕಲಸಿಕೊಳ್ಳಿ. ಒಂದು ಕೇಕ್ ಪಾತ್ರೆಗೆ ಸ್ವಲ್ಪ ಬೆಣ್ಣೆ ಸವರಿ, ಮೈದಾ ಹಿಟ್ಟು ಉದುರಿಸಿ ಅಥವಾ ಬಟರ್ ಪೇಪರ್ ಹಾಕಿ, ರೆಡಿ ಮಾಡಿದ ಬ್ಯಾಟರ್ ಸುರಿಯಿರಿ. ಮೇಲಿಂದ ಸ್ವಲ್ಪ ತೆಂಗಿನಕಾಯಿ ತುರಿ ಉದುರಿಸಿ. ಕುಕ್ಕರ್‌ನಲ್ಲಿ ತಳಕ್ಕೆ ಉಪ್ಪು ಅಥವಾ ಮರಳು ಹಾಕಿ, ಸ್ಟ್ಯಾಂಡ್ ಇಟ್ಟು 10 ನಿಮಿಷ ಬಿಸಿ ಮಾಡಿ. ಆಮೇಲೆ ಕೇಕ್ ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ, ಸಣ್ಣ ಉರಿಯಲ್ಲಿ 35-40 ನಿಮಿಷ ಬೇಯಿಸಿ.

ಚಾಕು ಚುಚ್ಚಿ ನೋಡಿದರೆ ಹಿಟ್ಟು ಅಂಟದಿದ್ದರೆ ಕೇಕ್ ರೆಡಿ ಎಂದರ್ಥ. ತಣ್ಣಗಾದ ಮೇಲೆ ಕಟ್ ಮಾಡಿ ತಿಂದರೆ ಮೃದುವಾದ, ಎಗ್ಲೆಸ್ ಕೊಕೊನಟ್ ಕೇಕ್ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !