Sunday, September 25, 2022

Latest Posts

ಸುಭಾಷರ ಅಜಾದ್‌ ಹಿಂದ್‌ ಫೌಜ್‌ ಸೇರಿ ಸ್ವಾತಂತ್ರ್ಯಕ್ಕಾಗಿ‌ ಹೋರಾಡಿದ್ದರು ನಂದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ನಂದಾ ಸಿಂಗ್ ಚೌಧರಿ ಅವರು 1922ರಲ್ಲಿ ಚಮೋಲಿ ಜಿಲ್ಲೆಯ ಕಿರ್ಸಾಲ್ ಗ್ರಾಮದಲ್ಲಿ ಜನಿಸಿದರು. ಅವರು 12 ಮಾರ್ಚ್ 1941 ರಂದು ಬ್ರಿಟೀಷ್ ಭಾರತದ ರಾಯಲ್ ಗರ್ವಾಲ್ ರೈಫಲ್‌ನಲ್ಲಿ ಕಾನ್ಸ್‌ಟೇಬಲ್ ಆಗಿ ನೇಮಕಗೊಂಡರು. ಆ ಬಳಿಕ ಅವರನ್ನು 1941 ರ ಡಿಸೆಂಬರ್ ನಲ್ಲಿ ಜಪಾನಿಯರೊಂದಿಗೆ ಯುದ್ಧಕ್ಕಾಗಿ ಬಾಂಬೆ ಬಂದರಿನಿಂದ ಮಲೇಷ್ಯಾಕ್ಕೆ ಕಳುಹಿಸಲಾಯಿತು. ಅವರು 3 ಜನವರಿ 1942ರಂದು ಮಲಯಾ ತಲುಪಿದರು. ಯುದ್ಧದ ಸಮಯದಲ್ಲಿ ಜಪಾನಿನ ಸೈನ್ಯದಿಂದ  ಸೆರೆಹಿಡಿಯಲ್ಪಟ್ಟು ಯುದ್ಧದ ಕೈದಿಯಾದರು.
ಆ ಬಳಿಕ ಅವರ ಮನಃಪರಿವರ್ತನೆಯಾಗಿ ಸುಭಾಷರ ಆಜಾದ್ ಹಿಂದ್ ಫೌಜ್‌ಗೆ ಸೇರಿದರು. ಅಲ್ಲಿ ಅವರು 3 ಮಾರ್ಚ್ 1946 ರವರೆಗೆ ಸೇವೆ ಸಲ್ಲಿಸಿದರು. ಕೊಹಿಮಾದಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತಿರುವಾಗ ಗಂಭೀರವಾಗಿ ಗಾಯಗೊಂಡರೂ ಕೊಹಿಮಾದಲ್ಲಿ ಬ್ರಟೀಷರಿಗೆ ಸೆಡ್ಡುಹೊಡೆದು ತ್ರಿವರ್ಣ ಧ್ವಜವನ್ನು ಹಾರಿಸಿದರು.
ದೇಶದ ಸ್ವಾತಂತ್ರ್ಯದ ಬಳಿಕ ಅವರು ಪಿಎಸಿಯಲ್ಲಿ ಕೆಲಸ ಮಾಡಿದರು ಮತ್ತು ಅವರನ್ನು ಟಿಬೆಟ್ ಗಡಿಯ ಹಲವು ಸ್ಥಳಗಳಲ್ಲಿ ನಿಯೋಜಿಸಲಾಯಿತು. ಅವರು 22 ಸೆಪ್ಟೆಂಬರ್ 2008ರಲ್ಲಿ ನಿಧನರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!