ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವೇಗೌಡರು ಯಾವ ಒಕ್ಕಲಿಗರನ್ನು ಬೆಳೆಸುವುದಿಲ್ಲ. ಯಾವ ಒಕ್ಕಲಿಗರನ್ನು ಬೆಳೆಸಿದ್ದಾರೆ ಎಂದು ಹೇಳಿ ನೋಡೋಣ? ದ್ವೇಷದ ರಾಜಕಾರಣ ಮಾಡುವುದರಲ್ಲಿ ದೇವೇಗೌಡರು ನಂಬರ್ 1 ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ದೊಡ್ಡ ಮಳೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನನ್ನು ನಾನು ಮುಖ್ಯಮಂತ್ರಿ ಮಾಡಿದೆ ಅಂತ ಹೇಳಿದರು. ಮಿಸ್ಟರ್ ದೇವೇಗೌಡ ನಾನು ಜಾಲಪ್ಪ ಇಲ್ಲದಿದ್ದರೆ ನೀವು ಸಿಎಂ ಆಗುತ್ತಿರಲಿಲ್ಲ. ನಾನು ಭೈರೆಗೌಡ ಸಿಂಧ್ಯಾ, ಹಲವರಿಂದ ದೇವೇಗೌಡರು ಸಿಎಂ ಆದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ನಿಮ್ಮ ಮೊಮ್ಮಗನ ಗೆಲ್ಲಿಸೋಕೆ ಯಾಕ್ರೀ ಸುಳ್ಳು ಹೇಳುತ್ತೀರಿ.ನಿಖಿಲ್ ಕುಮಾರಸ್ವಾಮಿ ಸೋಲಿಸುವುದು ನೂರಕ್ಕೆ ನೂರು ಸತ್ಯ. ದೇವೇಗೌಡರೇ ಮೊಮ್ಮಗನನ್ನು ಗೆಲ್ಲಿಸಲು ಸುಳ್ಳು ಹೇಳ್ತಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದರು.
ಸಿದ್ಧರಾಮಯ್ಯ ಸರ್ಕಾರ ತೆಗೆಯುವುದಕ್ಕೆ ಸಾಧ್ಯವಿಲ್ಲ. ಸರ್ಕಾರ ತೆಗೆಯಲು ದೇವೇಗೌಡನಿಂದಲೂ ಸಾಧ್ಯವಿಲ್ಲ, ಕುಮಾರಸ್ವಾಮಿಯಿಂದಲೂ ಸಾಧ್ಯವಿಲ್ಲ . ನಾನು ಎರಡನೇ ಬಾರಿಗೆ ಸಿಎಂ ಆಗಿದ್ದಕ್ಕೆ ಹೊಟ್ಟೆ ಉರಿ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಿಬಿಟ್ನಲ್ಲ ಎಂದು ಹೊಟ್ಟೆ ಉರಿ ದೇವೇಗೌಡ್ರೆ ನಿಮ್ಮ ಹೊಟ್ಟೆ ಉರಿ ನಿಮ್ಮನ್ನೇ ಸುಡುತ್ತದೆ. ನಿಮ್ಮ ಹೊಟ್ಟೆ ಉರಿ ನನ್ನನ್ನು ಏನು ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನಿಗೆ ಸೊಕ್ಕು ಬಂದಿದೆ ಅದು ದೇವೇಗೌಡರು ಹೇಳುತ್ತಾರೆ, ಸಿದ್ದರಾಮಯ್ಯನ ಅಹಂಕಾರ ಇಳಿಸಬೇಕು ಎಂದು ಹೇಳುತ್ತಾರೆ, ದೇವೇಗೌಡರು ಪ್ರಧಾನ ಮಂತ್ರಿ ಆಗಿದ್ದು ಆಕಸ್ಮಿಕವಾಗಿ ನೀವು ಇವತ್ತಿನವರೆಗೂ ಪಾಳೆಗಾರಿಕೆ ಪ್ರವರ್ತಿ ಬಿಟ್ಟಿಲ್ಲ. ಅಲ್ಪಸಂಖ್ಯಾತರನ್ನು ಕಂಡರೆ ಆಗಲ್ಲ ಮಹಿಳೆಯರನ್ನು ಕಂಡರೆ ಆಗಲ್ಲ ರೈತರಿಗೆ ಏನು ಮಾಡಿದ್ದೀರಿ? ಕುಮಾರಸ್ವಾಮಿ 11 ತಿಂಗಳು ಮುಖ್ಯಮಂತ್ರಿ ಆಗಿದ್ರಲ್ಲ ಏನು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.