ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದ್ದಕ್ಕಿದ್ದಂತೆಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಯಾಕೆ ಹೋಗ್ತಾರೆ? ದೇವೇಗೌಡರೇ ಪ್ಲಾನ್ ಮಾಡಿ ಅವರನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವ ಕುರಿತು ಮಾತನಾಡಿದ ಅವರು, ಪ್ರಜ್ವಲ್ ಸಿ.ಡಿ ಕೇಸ್‌ಗೂ ಡಿಸಿಎಂ ಡಿಕೆ ಶಿವಕುಮಾರ್‌ಗೂ ಸಂಬಂಧವಿಲ್ಲ. ಸೂರಜ್ ರೇವಣ್ಣ ಜೊತೆ ಪೋಟೋ ಇರೋದಕ್ಕೆ ಏನಾಗುತ್ತೆ? ಕುಮಾರಸ್ವಾಮಿ ಜೊತೆಗೂ ಡಿಕೆ ಶಿವಕುಮಾರ್ ಪೋಟೋ ಇದೆ. ಹಾಗಾದ್ರೆ ನಂದು ರೇವಣ್ಣನ ಜೊತೆ ಪೋಟೋ ಇದ್ದರೆ ಅವರನ್ನು ರಕ್ಷಣೆ ಮಾಡುತ್ತೇನೆ ಎಂದು ಅರ್ಥನಾ ಎಂದು ಪ್ರಶ್ನಿಸಿದರು.
ಯಾರು ಎಲ್ಲೇ ಇರಲಿ ತನಿಖೆ ಅಂದ್ಮೇಲೆ ಬರಲೇಬೇಕಾಗತ್ತೆ, ಪಾರದರ್ಶಕ ತನಿಖೆ ನಡೆಯಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.