ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಕಿಸುವ ಜನರು ಯಾವಾಗಲೂ ಇರುತ್ತಾರೆ, ನನ್ನ ಬಗ್ಗೆ ಬರುವ ಟೀಕೆಗಳನ್ನು ನಾನು ಸ್ವೀಕರಿಸುತ್ತೇನೆ. ಉಪಚುನಾವಣೆಯಲ್ಲಿ ಸೋತ ತಕ್ಷಣ ರಾಜಕೀಯ ಬಿಡುವುದಿಲ್ಲ ಸಾಯುವವರೆಗೂ ಮುಂದುವರೆಯುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಕಾಂಗ್ರೆಸ್ ಶಾಸಕ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶುಕ್ರವಾರ ಸಂಸತ್ ನಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಬಗ್ಗೆ ಮಾತನಾಡಿದ್ದೇನೆ. ನನ್ನ ರಾಜ್ಯಸಭೆ ಅವಧಿ 18 ತಿಂಗಳು ಇದೆ, ನನ್ನ ಆರೋಗ್ಯ ಇರುವವರೆಗೂ ನಾನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಹಾಸನದಲ್ಲಿ ಕಾಂಗ್ರೆಸ್ ಜನಕಲ್ಯಾಣ ಕುರಿತು ಮಾತನಾಡಿದ ಅವರು, ಹಾಸನದಲ್ಲಿ ಜೆಡಿಎಸ್ ಮೇಲೆ ಕಾಂಗ್ರೆಸ್ ಪ್ರಭಾವ ಇಲ್ಲ, ಹಾಸನದಲ್ಲಿ ಟಾರ್ಗೆಟ್ ಮಾಡಲೆಂದೇ ಸಮಾವೇಶ ಮಾಡಿದ್ದಾರೆ. ಈ ಸವಾಲನ್ನು ಎದುರಿಸುವ ಸಾಮರ್ಥ್ಯ ಜೆಡಿಎಸ್‌ಗೆ ಇದೆ. ನಾವು ಇಂದು ಎದುರಿಸುತ್ತೇವೆ ನಾಳೆಯೂ ಎದುರಿಸುತ್ತೇವೆ ಎಂದರು.