ದಿಗಂತ ವರದಿ ಬೀದರ್:
ಯುವಜನರು ಕಷ್ಟ ಪಟ್ಟು, ಅದನ್ನು ಇಷ್ಟದಿಂದ ಕೆಲಸ ಮಾಡುವ ಮನೋವೃತ್ತಿ ಬೆಳೆಸಿಕೊಳ್ಳುವಂತೆ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಟಿ.ಪಿ ಸಿದ್ರಾಮ್ ಕರೆ ನೀಡಿದರು.
ಇತ್ತಿಚೀಗೆ ನಗರದ ದೇವಿ ಮಂದಿರದಲ್ಲಿ ನೆಹರು ಯುವ ಕೇಂದ್ರ, ರೈಜಿಂಗ್ ಹ್ಯಾಂಡ್ಸ್ ಯುತ್ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ವೀರಭದ್ರೇಶ್ವರ ಏಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ವೃತ್ತಿ ಮಾರ್ಗದರ್ಶನ, ವೃತ್ತಿ ಸಮಾಲೋಚನೆ ಹಾಗೂ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾಡುವ ಕೆಲಸದ ಬಗ್ಗೆ ಪರಿಪೂರ್ಣ ತಿಳುವಳಿಕೆ ಹಾಗೂ ಅದರ ಬಗ್ಗೆ ಸಾಮಾನ್ಯ ಜ್ಞಾನ ಜರೂರಿಯಾಗಿದೆ ಏಂದು ಹೇಳಿದರು.
ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಯುವಕರಿಗಿಂತ ಯುವತಿಯರು ಮುಂದೆ ಬರುತ್ತಿದ್ದಾರೆ. ಅವರಲ್ಲಿನ ಚಾಣಾಕ್ಷತನ, ನಿರಂತರ ಪ್ರಯತ್ನ ಹಾಗೂ ಸ್ಪರ್ಧಾ ಮನೋಭಾವ ಪ್ರಧಾನ ಕಾರಣಗಳಾಗಿವೆ. ಆದರೆ ಯುವಕರು ನಿರಾಸೆದಾಯಕ ಬದುಕಿಗೆ ಮಾರುಹೋಗಿ, ದುಷ್ಚಟಗಳಿಗೆ ದಾಸ್ಯರಾಗಿ, ಕೆಟ್ಟ ಮನೋವೃತ್ತಿ ಬೆಳೆಸಿಕೊಂಡು ಇಂದು ಅಪರಾಧಿಗಳಾಗಿ ಹೊರಹೊಮ್ಮುತ್ತಿರುವರು. ಈ ದೂರ್ಥದಿಂದ ಪಾರಾಗಲು ಪಾಲಕರಾದವರು ತಮ್ಮ ಮಕ್ಕಳಿಗೆ ಮೊದಲು ಸಂಸ್ಕಾರ ಹಾಗೂ ಸಂಸ್ಕøತಿ ಕಲಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪರಿಪೂರ್ಣ ಮಾರ್ಗದರ್ಶನ ಮಾಡುವಂತೆ ನ್ಯಾಯಾಧೀಶರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಹಾರ್ದಾ ರೂಡ್‍ಸೆಟ್ ಸಂಸ್ಥೆ ನಿರ್ದೇಶಕ ಸುಬ್ರಮಣ್ಯ ಪ್ರಭು ಅವರು, ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಂಪನ್ಮೂಲದ ಕೊರತೆ ಜಾಸ್ತಿಯಾಗುತ್ತಿದೆ. ಸಾವಿರ ಉದ್ಯೋಗಕ್ಕೆ ಲಕ್ಷಾವಧಿ ಯುವಜನರು ಸ್ಪರ್ಧೆ ಮಾಡುತ್ತಿರುವರು. ಇದು ಆರೋಗ್ಯಪೂರ್ಣ ಸ್ಪರ್ಧೆಯಾಗುವುದಿಲ್ಲ. ಸಂಪನ್ಮೂಲಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾದಾಗ ಮಾತ್ರ ಆರೋಗ್ಯಯುತ ಉದ್ಯೋಗ ನಿರ್ಮಾಣ ಸಾಧ್ಯವಿದೆ ಎಂದು ಪ್ರತಿಪಾದಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಶಂಭೂಲಿಂಗ ಕಾಮಣ್ಣ ಮಾತನಾಡಿ, ಕೆಲಸದಲ್ಲಿ ಬದ್ದತೆ ಇರಬೇಕು, ಅದರಲ್ಲಿ ಪ್ರೀತಿ, ಗೌರವ ಕಾಣಬೇಕು, ಧೈರ್ಯ, ಕ್ರೀಯಾಶೀಲತೆ, ಆದ್ಯತೆ, ಆತ್ಮವಿಶ್ವಾಸ, ಉತ್ತಮ ಚಾರಿತ್ರ್ಯೆ, ಶಿಸ್ತು ಇದ್ದರೆ ಮಾತ್ರ ಕ್ರಮಬದ್ದ ಜೀವನ ಸಾಧ್ಯವಿದೆ. ಎಲ್ಲಕ್ಕೂ ಮಿಗಿಲಾಗಿ ನಿರ್ದಿಷ್ಟ ಗುರಿ, ಸಾಧಿಸುವ ಛಲವಂತಿಕೆ ಇವು ಉದ್ಯೋಗದ ಲಕ್ಷಣವಾಗಿರಬೇಕೆಂದು ಹೇಳಿದರು.
ತಾಂತ್ರಿಕ ತರಬೇತಿ ಸಲಹೆಗಾರ ಸಂತೋಷ ಬಸವರಾಜ ಉದ್ಯೋಗದ ಬೆಳವಣಿಗೆ ಮೇಲೆ ಬೆಳಕು ಚಲ್ಲಿದರು. ಬಾಪು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕಾಶಿನಾಥ ಪಾಟೀಲ, ಚಾಣುಕ್ಯ ಕಾಲೇಜಿನ ಪ್ರಾಚಾರ್ಯ ದತ್ತಾತ್ರೆಯ ಹಾಗೂ ಸ್ವಾಮಿ ನರೇಂದ್ರ ಕಾಲೇಜಿನ ಪ್ರಾಚಾರ್ಯೆ ಮಂಗಲಾ.ಎಮ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರ್ಮೆ ವೇದಿಕೆಯಲ್ಲಿದ್ದರು. ರೈಜಿಂಗ್ ಹ್ಯಾಂಡ್ಸ್ ಯುವ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸತೀಶ ಬೆಳಕೋಟೆ ಸ್ವಾಗತಿಸಿ, ಸದಸ್ಯ ಆನಿಲ್ ಜಾಧವ್ ಕಾರ್ಯಕ್ರಮ ನಿರೂಪಿಸಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಶಿವಕುಮಾರ ಸ್ವಾಮಿ ವಂದಿಸಿದರು. ಜಿಲ್ಲೆಯ ನೂರಾರು ಯುವಜನರು ಕಾರ್ಯಕ್ರಮದಲ್ಲಿದ್ದರು.