U19 ವಿಶ್ವಕಪ್: ಸೆಮಿಫೈನಲ್ ಪಂದ್ಯದ ವೇಳೆಯಲ್ಲಿ ಲಘು ಭೂಕಂಪನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ U19 ವಿಶ್ವಕಪ್ ಪಂದ್ಯದ ಸೆಮಿಫೈನಲ್ ವೇಳೆಯಲ್ಲಿ ಲಘು ಭೂಕಂಪನ ಸಂಭವಿಸಿದೆ.
ಜಿಂಬಾಬ್ವೆ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಐರ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದಾಗ ಪೋರ್ಟ್ ಆಫ್ ಸ್ಪೇನ್ ಕರಾವಳಿಯಲ್ಲಿ ಭೂಕಂಪನವು ಕ್ರೀಡಾಂಗಣದಲ್ಲಿ ಲಘು ಕಂಪನವನ್ನು ಉಂಟುಮಾಡಿದೆ ಎಂದು ESPNcricinfo ವರದಿ ಮಾಡಿದೆ.
ಆದರೆ ಈ ಅನುಭವ ಕೇವಲ ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತಿದ್ದವರಿಗೆ ಮಾತ್ರವಾಗಿದ್ದು, ಕ್ರಿಕೆಟ್​ ಪಂದ್ಯ ಆಡುತ್ತಿದ್ದವರಿಗೆ ಈ ಭೂಕಂಪನದ ಅನುಭವ ಆಗಿಲ್ಲ ಎಂದು ತಿಳಿದು ಬಂದಿದೆ.
ನಾವು ಭೂಕಂಪನವಾಗಿದೆ ಎಂದು ನಂಬುತ್ತೇವೆ. ನಮ್ಮ ಹಿಂದೆ ರೈಲು ಹೋದ ಹಾಗೆ ನಮಗೆ ಅನ್ನಿಸಿತು ಎಂದು ಭೂಕಂಪದ ಕುರಿತು ಕಾಮೆಂಟರಿ ಬಾಕ್ಸ್​ನಲ್ಲಿದ್ದ ಐಸಿಸಿ ಕಮೆಂಟೇಟರ್​​ ಆ್ಯಂಡ್ರೂ ಲಿಯೋನಾರ್ಡ್​ ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!