Saturday, April 1, 2023

Latest Posts

ನಾಳೆ ಕೊಡಗಿಗೆ ಮುಖ್ಯಮಂತ್ರಿ ಭೇಟಿ : 500 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಹೊಸದಿಗಂತ ವರದಿ ಮಡಿಕೇರಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾ. 18 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದಗದು, ಸುಮಾರು 500 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ನಗರದ ಗಾಂಧಿ ಮೈದಾನದಲ್ಲಿ ಮಧ್ಯಾಹ್ನ ನಡೆಯುವ ಸಮಾವೇಶದಲ್ಲಿ ಅವರು ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದು‌,‌ಇದೇ‌ ಸಂಸರ್ಭ ಅವರು ವಿವಿಧ‌ ಕಾಮಗಾರಿಗಳಿಗೆ‌ ಶಂಕುಸ್ಥಾಪನೆ ಮಾಡಲಿದ್ದಾರೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರಗದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮಗಳು: ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ನಿರ್ಮಾಣವಾಗಿರುವ ಗಾಂಧಿ ಭವನ ಉದ್ಘಾಟನೆ (287.80 ಲಕ್ಷ ರೂ), ಗ್ರೇಟರ್ ರಾಜಸೀಟು ಉದ್ಯಾನವನ ಉದ್ಘಾಟನೆ (455 ಲಕ್ಷ), ಕೊಡಗು ಜಿಲ್ಲಾ ತರಬೇತಿ ಸಂಸ್ಥೆ ನಿರ್ಮಾಣ ಕಾಮಗಾರಿ (400 ಲಕ್ಷ), ಕುಶಾಲನಗರ-ನೂತನ ಪಶುಆಸ್ಪತ್ರೆ ಕಟ್ಟಡ ಉದ್ಘಾಟನೆ (38 ಲಕ್ಷ), ಕುಶಾಲನಗರ-ಸುಂಟಿಕೊಪ್ಪ, ಮುತ್ತಪ್ಪ ಕಾಲೋನಿ ಅಂಗನವಾಡಿ ಕೇಂದ್ರ ಉದ್ಘಾಟನೆ(17 ಲಕ್ಷ), ವೀರಾಜಪೇಟೆ ಈಚೂರು ಮುಗುಟಗೇರಿ ಅಂಗನವಾಡಿ ಕೇಂದ್ರ ಉದ್ಘಾಟನೆ (16 ಲಕ್ಷ), ವೀರಾಜಪೇಟೆ-ಗುಂಡಿಕೆರೆ ಅಂಗನವಾಡಿ ಕೇಂದ್ರ ಉದ್ಘಾಟನೆ (16 ಲಕ್ಷ).

ಸೋಮವಾರಪೇಟೆ-ರೈತ ಸಂಪರ್ಕ ಕೇಂದ್ರ, ಶನಿವಾರಸಂತೆ ಕಟ್ಟಡ (50 ಲಕ್ಷ), ಸೋಮವಾರಪೇಟೆ-ರೈತ ಸಂಪರ್ಕ ಕೇಂದ್ರ, ಸೋಮವಾರಪೇಟೆ ಕಸಬಾ ಕಟ್ಟಡ (50 ಲಕ್ಷ), ವೀರಾಜಪೇಟೆ ರೈತ ಸಂಪರ್ಕ ಕೇಂದ್ರ (50 ಲಕ್ಷ), ಪೊನ್ನಂಪೇಟೆ-ಹುದಿಕೇರಿ ರೈತ ಸಂಪರ್ಕ ಕೇಂದ್ರ(50 ಲಕ್ಷ), ಪೊನ್ನಂಪೇಟೆ-ಶ್ರೀಮಂಗಲ ರೈತ ಸಂಪರ್ಕ ಕೇಂದ್ರ (ರೂ.50 ಲಕ್ಷ), ಕುಶಾಲನಗರ-ಬಸವನಹಳ್ಳಿ ವಾಲ್ಮೀಕಿ ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ (320.20 ಲಕ್ಷ), ಸೋಮವಾರಪೇಟೆ-ತಾಲೂಕು ಕೇಂದ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ (150 ಲಕ್ಷ), ಸೋಮವಾರಪೇಟೆ-ಕೊಡ್ಲಿಪೇಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ (50 ಲಕ್ಷ).

ವೀರಾಜಪೇಟೆ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿ (194.60 ಲಕ್ಷ), ಸೋಮವಾರಪೇಟೆ-ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ (2500 ಲಕ್ಷ), ಸೋಮವಾರಪೇಟೆ-ಶಾಂತಳ್ಳಿ ಹೋಬಳಿ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಟ್ಟಡ (80 ಲಕ್ಷ), ಕುಶಾಲನಗರ-ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ (400 ಲಕ್ಷ), ಸೋಮವಾರಪೇಟೆ-ಪ್ರ.ಮಂ.ಆದರ್ಶ ಗ್ರಾಮ ಯೋಜನೆ, ಊರುಗುತ್ತಿ ಗ್ರಾಮ, ಬ್ಯಾಡಗೊಟ್ಟ ಗ್ರಾ.ಪಂ., ನಿಲುವಾಗಿಲು ಗ್ರಾಮ, ನೀರುಗುಂದ ಗ್ರಾಮ ಬೆಸ್ಸೂರು ಗ್ರಾ.ಪಂ‌. (120 ಲಕ್ಷ),
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಹಾಸ್ಟೆಲ್ ನಿರ್ಮಾಣ (20 ಕೋಟಿ) ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ 450 ಹಾಸಿಗೆಯ ಸಾಮರ್ಥ್ಯದ ಬೋಧಕ ಆಸ್ಪತ್ರೆ ಕಟ್ಟಡ ನಿರ್ಮಿಸುವ ಕಾಮಗಾರಿಯಲ್ಲಿ 150 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ (40 ಕೋಟಿ ಮಹಿಳಾ ಮತ್ತು ಮಕ್ಕಳ ವಿಭಾಗ), ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿ (227 ಕೋಟಿ), ಗೋಣಿಕೊಪ್ಪ-ಅಗ್ನಿಶಾಮಕ ಠಾಣೆ ನೂತನ ಕಟ್ಟಡ ಶಂಕುಸ್ಥಾಪನೆ (3 ಕೋಟಿ), ಮಡಿಕೇರಿ-ಸ.ಹಿ.ಪ್ರಾ.ಶಾಲೆ, ಕೊಯನಾಡು (13.90 ಲಕ್ಷ), ಕುಶಾಲನಗರ-ಸ.ಹಿ.ಶಾಲೆ, 7ನೇ ಹೊಸಕೋಟೆ (16.40ಲಕ್ಷ), ಕುಶಾಲನಗರ-ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನಿಲಯ(ಎಸ್.ಸಿ.ಪಿ/ಟಿ.ಎಸ್.ಪಿ.ಯೋಜನೆ) (150 ಲಕ್ಷ), ಕುಶಾಲನಗರ-ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನಿಲಯ(ಸಾಮಾನ್ಯ ಯೋಜನೆ) (150 ಲಕ್ಷ).
ವೀರಾಜಪೇಟೆ-ನೀರಿನ ಸಂಪರ್ಕ ಕಾವೇರಿ ನದಿ ಬೇತ್ರಿ ಗ್ರಾಮ(58.38 ಕೋಟಿ), ಸೋಮವಾರಪೇಟೆ-ನೀರಿನ ಸಂಪರ್ಕ ಹಾರಂಗಿ(15.26 ಕೋಟಿ).

ಶಂಕುಸ್ಥಾಪನಾ ಕಾರ್ಯಕ್ರಮಗಳು: ಮಡಿಕೇರಿ ನಗರದಲ್ಲಿ ಐಟಿಡಿಪಿ ಕಚೇರಿ ಜಿಲ್ಲಾ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ (198.10 ಲಕ್ಷ), ವಾಲ್ಮೀಕಿ ಆಶ್ರಮ ಶಾಲೆ, ಕರಿಕೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ(199.86 ಲಕ್ಷ), ಪೊನ್ನಂಪೇಟೆ-ವಾಲ್ಮೀಕಿ ಆಶ್ರಮ ಶಾಲೆ, ನಾಗರಹೊಳೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ (199.86 ಲಕ್ಷ), ಸೋಮವಾರಪೇಟೆ-ಯಡವನಾಡು ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ (60 ಲಕ್ಷ), ಪೊನ್ನಂಪೇಟೆ-ಕೋತೂರು ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ (40 ಲಕ್ಷ), ಮಡಿಕೇರಿ-ಕಟ್ಟಪಳ್ಳಿ ಆಶ್ರಮ ಶಾಲೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ (20 ಲಕ್ಷ), ಮೂಲನಿವಾಸಿ ಜೇನುಕುರುಬ ಜನಾಂಗದ ಅಭಿವೃದ್ಧಿ ಯೋಜನೆಯಡಿ ಹಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿ ಶಂಕುಸ್ಥಾಪನೆ(98 ಲಕ್ಷ), ಮಡಿಕೇರಿ-ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜು ಶಂಕುಸ್ಥಾಪನೆ(170 ಲಕ್ಷ), ವೀರಾಜಪೇಟೆ-ಅಮ್ಮತ್ತಿ ಹೋಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿ(75 ಲಕ್ಷ), ವೀರಾಜಪೇಟೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ(199.95 ಲಕ್ಷ), ಪೊನ್ನಂಪೇಟೆ-ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ(199.95 ಲಕ್ಷ), ಪೊನ್ನಂಪೇಟೆ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ (199.95 ಲಕ್ಷ), ನಾಪೋಕ್ಲು ಹೋಬಳಿ ನೂರಂಬಡ ಮಠದ ಬಳಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ(50 ಲಕ್ಷ), ಕೊ.ವೈ.ವಿ.ಸಂ.ಆವರಣದಲ್ಲಿ ರೋಗಿಗಳ ಸಹಾಯಕರುಗಳಿಗೆ ವಿಶ್ರಾಂತಿ ಶಾಲೆ ನಿರ್ಮಾಣ(60 ಲಕ್ಷ), ಕೊ.ವೈ.ವಿ.ಸಂ. 50 ಹಾಸಿಗೆ ಸಾಮರ್ಥ್ಯದ ‘ಕ್ರಿಟಿಕಲ್ ಕೇರ್ ಯೂನಿಟ್’ ಆಸ್ಪತ್ರೆ ಕಟ್ಟಡ ನಿರ್ಮಿಸುವ ಕಾಮಗಾರಿ (29.85 ಕೋಟಿ), ಕರ್ಣಂಗೇರಿ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ಧತಿಯಡಿ ಕೃಷಿ ಕೇಂದ್ರ ನಿರ್ಮಾಣ (436 ಲಕ್ಷ, ಗೋಣಿಕೊಪ್ಪ ಬಸ್ ನಿಲ್ದಾಣ (4 ಕೋಟಿ). ಹೀಗೆ ವಿವಿಧ ಇಲಾಖೆಗಳ ಯೋಜನೆಗೆ ಮಾನ್ಯ ಮುಖ್ಯಮಂತ್ರಿ ಅವರು ಚಾಲನೆ ನೀಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!