ರಾಜ್ಯದಲ್ಲಿ ಅಭಿವೃದ್ಧಿ ಯಾತ್ರೆ ಪ್ರಾರಂಭ: ಸಚಿವ ಬಿ.ಶ್ರೀರಾಮುಲು

ಹೊಸ ದಿಗಂತ ವರದಿ,ಬಳ್ಳಾರಿ:

ಕೆಲವರು ಗಡ್ಡ, ಮೀಸೆ ಬಿಟ್ಕೊಂಡು ಯಾತ್ರೆ ಮಾಡ್ತಾರೆ, ಕೆಲವರು ಜಗಳ ಬಿಡಿಸಲು ಯಾತ್ರೆ ಶುರು ಮಾಡಿದ್ದಾರೆ. ಆದರೇ, ನಮ್ಮ ಸಿ.ಎಂ.ಬೊಮ್ಮಾಯಿ ಅವರು ಅಭಿವೃದ್ಧಿ ಯಾತ್ರೆ ಮಾಡುತ್ತಿದ್ದಾರೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಮುನ್ಸಿಪಲ್ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 663 ಕೊಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯದ 30ಜಿಲ್ಲೆಗಳಲ್ಲೂ ನಮ್ಮ ಅಭಿವೃದ್ಧಿ ಯಾತ್ರೆ ಪ್ರಾರಂಭವಾಗಿದೆ. ಕೆಲ ದಿನಗಳಲ್ಲಿ ಸಂಕ್ರಾಂತಿ ಸುಗ್ಗಿಕಾಲ ಬರಲಿದೆ, ಅದಕ್ಕೂ ಮುನ್ನವೇ ನಮ್ಮ ಭಾಗದಲ್ಲಿ ಸುಗ್ಗಿಕಾಲ ಪ್ರಾರಂಭವಾಗಿದೆ, ಅವದಿಯಲ್ಲಿ ಜಿಲ್ಲೆ ಅಭಿವೃದ್ದೀಯಲ್ಲಿ ರಾಜ್ಯದಲ್ಲೇ ಮಾದರಿಯಾಗಲಿದೆ ಎಂದರು. ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಬಂದು ಇಲ್ಲಿವರೆಗೆ ಬಡವರಿಗೆ ಪಟ್ಟಾ ವಿತರಣೆ ಮಾಡಿರಲಿಲ್ಲ, ಪರಿಚಯ ಪತ್ರಗಳನ್ನು ನೀಡಿ ಕೈತೊಳೆದುಕೊಂಡಿದ್ದಾರೆ, ಗುಡಿಸಲುಗಳಲ್ಲಿ ವಾಸವಿರುವ ಸುಮಾರು12,531 ಜನರಿಗೆ ಮನೆಗೆಳ ಪಟ್ಟಾಗಳನ್ನು ವಿತರಿಸಿದ್ದೇವೆ, 3-4 ದಿನಗಳಲ್ಲಿ ನಾನೇ ಮನೆ ಮನೆಗೆ ಭೇಟಿ ನೀಡಿ ಪಟ್ಟಾಗಳನ್ನು ನೀಡುವೆ, ಸುಳ್ಳು ಹೇಳುವ ಜಾಯಮಾನ ನಮ್ಮದಲ್ಲ, ನುಡಿದಿದ್ದನ್ನೇ ನಡೆಯುವ ಜಾಯಮಾನ ನಮ್ಮದು, ನಮ್ಮ ಡಬಲ್ ಎಂಜಿನ್ ಸರ್ಕಾರ ಎಲ್ಲ ವರ್ಗಗಳ ಹಿತಕಾಯುವ ಸರ್ಕಾರವಾಗಿದೆ. ನಾವು ಅಭಿವೃದ್ಧಿ ಮುಂದಿಟ್ಟುಕೊಂಡು ಹೋತ್ತೇವೆ, ಜನರು ನಮ್ಮ ಪರವಾಗಿದ್ದಾರೆ, ಮುಂಬರುವ 2023ರಲ್ಲಿ ಮತ್ತೇ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ, ಇದರಲ್ಲಿ ಅನುಮಾನವೇ ಬೇಡ ಎಂದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಮಾಜಿ ಸಂಸದರಾದ ಸಣ್ಣ ಫಕೀರಪ್ಪ, ಜೆ.ಸಾಂತಾ, ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ, ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಎಮ್ಮೆಲ್ಸಿ ಶಶಿಲ್‌ ನಮೋಶಿ, ಮೇಯರ್ ರಾಜೇಶ್ವರಿ ಸುಬ್ಬರಾಯಡು, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿರುಪಾಕ್ಷಗೌಡ, ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್ ಸರ್ವಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಜಿ.ಪಂ.ಸಿಇಒ ಸಿದ್ಧಲಿಂಗೇಶ್ವರ, ಎಡಿಸಿ ಮಂಜುನಾಥ್, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!