ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಾಲಿಂಪಿಯನ್ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ದೇವೇಂದ್ರ ಜಜಾರಿಯಾ ಅವರನ್ನು ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
PCI ಕಾರ್ಯಕಾರಿ ಸಮಿತಿಯ ಅವಧಿ ಮುಗಿದ ನಂತರವೂ ಚುನಾವಣೆಗಳು ನಡೆಯಲು ವಿಫಲವಾದ ನಂತರ ಕ್ರೀಡಾ ಸಚಿವಾಲಯವು ಫೆಬ್ರವರಿಯಲ್ಲಿ PCI ಮಾನ್ಯತೆಯನ್ನು ಅಮಾನತುಗೊಳಿಸಿತ್ತು. ಮಾರ್ಚ್ 28 ರಂದು ಚುನಾವಣೆ ನಡೆಸಲು ಪಿಸಿಐ ನಿರ್ಧಾರಕ್ಕೆ ಯಾವುದೇ ಬಲವಾದ ಕಾರಣವಿಲ್ಲ ಎಂದು ಸಚಿವಾಲಯ ಹೇಳಿದೆ.
ಅಮಾನತುಗೊಂಡ ನಂತರ, ಪಿಸಿಐ ಮಾರ್ಚ್ 9 ರಂದು ನವದೆಹಲಿಯಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿತ್ತು. ಕ್ರೀಡಾ ಸಚಿವಾಲಯ ಮಂಗಳವಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಿಸಿಐ ಅಮಾನತು ರದ್ದುಗೊಳಿಸಿದೆ. ಈಗ ಜಜಾರಿಯಾ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಬೆಸ್ಟ್ ಪರ್ಸನ್ ಪ್ರತಾಪ್ ಸಿಂಹ