ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಯಾಗಿದೆ.
ಮಹಾರಾಷ್ಟ್ರದ ಎರಡನೇ ರಾಜಧಾನಿ ನಾಗ್ಪುರದ ರಾಜಭವನದಲ್ಲಿ ಇಂದು ಸಂಜೆ ನಡೆದ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವಂಕುಲೆ, ರಾಧಾಕೃಷ್ಣ ವಿಕೆ ಪಾಟೀಲ್, ಅಶಿಶ್ ಶೆಲಾರ್, ಚಂದ್ರಕಾಂತ್ ಪಾಟೀಲ್, ಗಿರೀಶ್ ಮಹಾಜನ್, ಗಣೇಶ್ ನಾಯಕ್, ಮಂಗಲ್ ಪ್ರತಾಪ್ ಲೊಧಾ, ಜಯಕುಮಾರ್ ರಾವಲ್, ಪಂಕಜ್ ಮುಂಡೆ, ಅತುಲ್ ಸಾವೆ ಸೇರಿದಂತೆ ಮತ್ತಿತರರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಹೊಸ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದಿಂದ ದಾದಾ ಭೂಸೆ, ಶಂಭುರಾಜ್ ದೇಸಾಯಿ, ಸಂಜಯ್ ರಾಥೋಡ್, ಗುಲಾಬ್ರಾವ್ ಪಾಟೀಲ್ ಮತ್ತು ಉದಯ್ ಸಾಮಂತ್ ಮಂತ್ರಿಗಳಾಗಿದ್ದು, ಅಜಿತ್ ಪವಾರ್ ಅವರ ಎನ್‌ಸಿಪಿ ನಾಯಕರಾದ ಮಾಣಿಕ್ರಾವ್ ಕೊಕಾಟೆ, ದತ್ತಾತ್ರೇ ವಿಠ್ಠಲ ಭರ್ನೆ, ಹಸನ್ ಮುಶ್ರೀಫ್, ಅದಿತಿ ಸುನೀಲ್ ತಟ್ಕರೆ ಮತ್ತು ಧನಂಜಯ್ ಮುಂಡೆ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಡಿಸೆಂಬರ್ 5 ರಂದು ದೇವೇಂದ್ರ ಫಡ್ನವಿಸ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 10 ದಿನಗಳ ನಂತರ ಸಂಪುಟ ವಿಸ್ತರಣೆಯಾಗಿದೆ.