ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್ ನಿತ್ಯ ಉಚಿತ ಅನ್ನದಾನ ಸೇವೆ ನೀಡುತ್ತಿದೆ. ಆದರೆ ಇದೀಗ ಈ ಟ್ರಸ್ಟ್ಗೆ 2,200 ಕೋಟಿ ರೂಗೆ ಮೀರಿ ದೇಣಿಗೆ ಹರಿದು ಬಂದಿದೆ.
1984ರಲ್ಲಿ ಮಾಜಿ ಮುಖ್ಯಮಂತ್ರಿ ಎನ್ಟಿ ರಾಮ ರಾವ್ ವೆಂಕಟೇಶ್ವರ ನಿತ್ಯ ಅನ್ನದಾನಂ ಯೋಜನೆ ಅಡಿ ಭಕ್ತರಿಗೆ ಉಚಿತ ಆಹಾರ ಸೇವೆ ನೀಡುವ ಯೋಜನೆ ಜಾರಿಗೆ ತಂದಿದ್ದರು. ಆ ಬಳಿಕ ಈ ಯೋಜನೆಯನ್ನು ಶ್ರೀವೆಂಕಟೇಶ್ವರ ನಿತ್ಯ ಅನ್ನದಾನಂ ಟ್ರಸ್ಟ್ ಆಗಿ ಪರಿವರ್ತಿಸಲಾಯಿತು. 2014ರಲ್ಲಿ ಇದನ್ನು ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್ ಆಗಿ ಮರು ನಾಮಕರಣ ಮಾಡಲಾಯಿತು.
ಆರಂಭದಲ್ಲಿ ಕೇವಲ 2 ಸಾವಿರ ಭಕ್ತರಿಗೆ ಉಚಿತ ಅನ್ನದಾನ ಸೇವೆಯನ್ನು ನೀಡಲಾಗುತ್ತಿತ್ತು. ಇದೀಗ ಲಕ್ಷಕ್ಕೂ ಮೀರಿದ ಭಕ್ತರಿಗೆ ಪ್ರತಿನಿತ್ಯ ಸೇವೆ ಒದಗಿಸಲಾಗುತ್ತಿದೆ. ಸದ್ಯ ಟ್ರಸ್ಟ್ನಲ್ಲಿ 9.7 ಲಕ್ಷ ದಾನಿಗಳು ಇದ್ದಾರೆ. ಇದರಲ್ಲಿ 139 ದಾನಿಗಳು 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡಿದ್ದಾರೆ. 294 ದಾನಿಗಳಿಗಳು ತಲಾ 44 ಲಕ್ಷ ದೇಣಿಗೆ ಜೊತೆಗೆ ದಿನದ ಸಂಪೂರ್ಣ ಅನ್ನದಾನ ಸೇವೆಗೆ ದಾನ ಮಾಡಿದ್ದಾರೆ.