ತಿರುಪತಿ ತೆರಳುವ ಭಕ್ತರೇ ಗಮನಿಸಿ: ರೂಂ ನಿಯಮದಲ್ಲಿ ಆಗಿದೆ ಬದಲಾವಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಪ್ರತಿ ದಿನ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದರುಶನ ಪಡೆಯುತ್ತಾರೆ. ಹಲವು ರಾಜ್ಯಗಳಿಂದ ತಿರುಪತಿ ತಿಮ್ಮಪ್ಪನ ದರುಶಕ್ಕೆ ಭಕ್ತರು ತೆರಳುತ್ತಾರೆ. ಇದರ ನಡುವೆ ತಿರುಪತಿ ತಿರುಮಲ ದೇವಸ್ಥಾನಂ ಆಡಳಿತ ಮಂಡಳಿ ಕೆಲ ನಿಮಯದಲ್ಲಿ ಬದಲಾವಣೆ ಮಾಡಿದೆ.

ಟಿಟಿಡಿ ಇದೀಗ ಹೊಸ ರೂಂ ನಿಯಮದಲ್ಲಿ ಬದಲಾವಣೆ ಮಾಡಿದೆ. ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮ ಜಾರಿಗೆ ತರಲಾಗಿದೆ.

ಜನಸಾಮಾನ್ಯರಿಗೆ ಕೊಠಡಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ಆದರೆ ರಾಜಕಾರಣಿಗಳು, ಸಚಿವರು, ಪೊಲೀಸರು ಸೇರಿದಂತೆ ಇತರ ಉನ್ನತ ಹುದ್ದೆಗಳಲ್ಲಿರುವವರ ಶಿಫಾರಸು ಪತ್ರವನ್ನು ಹಿಡಿದುಕೊಂಡು ಬರುವ ಭಕ್ತರಿಗೆ ರೂಂ ನೀಡುವ ಪದ್ಧತಿಯಲ್ಲಿ ಬದಲಾವಣೆ ಮಾಡಾಗಿದೆ.

ಇಷ್ಟು ದಿನ ತಿರುಪತಿ ದರುಶ ಟಿಕೆಟ್ ಇಲ್ಲದಿದ್ದರೂ ಈ ರೀತಿಯ ಶಿಫಾರಸು ಪತ್ರ ತರುವ ಭಕ್ತರಿಗೆ ಕೊಠಡಿ ವ್ಯವಸ್ಥೆ ಮಾಡಲಾಗುತ್ತಿತ್ತು. ಇನ್ಮುಂದೆ ಕೊಠಡಿ ಪಡೆಯಲು ತಿರುಪತಿ ದರುಶ ಟಿಕೆಟ್ ಕಡ್ಡಾಯವಾಗಿದೆ.

ಟಿಕೆಟ್ ಇಲ್ಲದಿದ್ದರೆ ಕೊಠಡಿ ವ್ಯವಸ್ಥೆ ಇರುವುದಿಲ್ಲ. ಶಿಫಾರಸಿನ ಪತ್ರದ ಕಾರಣಕ್ಕೆ ಕೊಠಡಿ ನೀಡಲಾಗುವುದಿಲ್ಲ. ಜನಸಾಮಾನ್ಯರಿಗೆ ಈ ಕೊಠಡಿಗಳನ್ನು ಮೀಸಲಿಡಲಾಗಿದೆ. ಹೀಗಾಗಿ ತಿರುಪತಿ ದರುಶ ಟಿಕೆಟ್ ಇರುವ ಭಕ್ತರು ಯಾವುದೇ ಸಮಸ್ಯೆ ಇಲ್ಲದೆ ಕೊಠಡಿ ಪಡೆಯಬಹುದು ಎಂದು ತಿರುಪತಿ ತಿರುಮಲ ದೇವಸ್ಥಾನಂ ಹೇಳಿದೆ.

ದೇವಸ್ಥಾನ ಪ್ರತಿ ದಿನ 7,500 ಕೊಠಡಿಗಳನ್ನು ಭಕ್ತರಿಗೆ ನೀಡುತ್ತದೆ. ಈ ಪೈಕಿ 3500 ಕೊಠಡಿಗಳು ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದೆ. ಇನ್ನು ಆನ್‌ಲೈನ್ ಬುಕಿಂಗ್ ಮೂಲಕ 1580 ಕೊಠಡಿ ಮೀಸಲಿಡಲಾಗಿದೆ. ವಿವಿಧ ಸಂಘ ಸಂಸ್ಥೆಗಳು, ದಾನಿಗಳಿಗಾಗಿ 400 ಕೊಠಡಿ ಮೀಸಲಿಡಲಾಗಿದೆ. ಇನ್ನುಳಿದ ಕೊಠಡಿಗಳನ್ನು ವಿಐಪಿ, ವಿವಿಐಪಿಗಳಿಗೆ ಮೀಸಲಿಡಲಾಗಿದೆ.

ತಿರುಪತಿ ನೋ ಫ್ಲೈ ಜೋನ್ ಕೂಗು
ಇನ್ನು ತಿರುಮಲ ಪ್ರದೇಶವನ್ನು ನೋ ಫ್ಲೈ ಜೋನ್ ಮಾಡ್ಬೇಕು ಅನ್ನೋ ಕೂಗು ಜೋರಾಗುತ್ತಿದೆ. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (Tirupati Temple Administration) ಸಿವಿಲ್ ಏವಿಯೇಷನ್ ಸಚಿವಾಲಯಕ್ಕೆ ಈ ಕುರೀತು ಮನವಿ ಮಾಡಿದೆ. ಸೆಂಟ್ರಲ್ ಸಿವಿಲ್ ಏವಿಯೇಷನ್ ಮಿನಿಸ್ಟರ್ ರಾಮ್ ಮೋಹನ್ ನಾಯ್ಡು ಕಿಂಜರಾಪು (Ram Mohan Naidu Kinjarapu) ಭಾನುವಾರ ಈ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ (ATC) ಜೊತೆ ಮಾತುಕತೆ ನಡೆಸಿದ್ದಾರೆ.

ದೇವಸ್ಥಾನ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ (TTD) ಭಾನುವಾರ ಸಿವಿಲ್ ಏವಿಯೇಷನ್ ಮಿನಿಸ್ಟರ್​ಗೆ ಪತ್ರ ಬರೆದಿದೆ. ತಿರುಮಲವನ್ನ ‘ನೋ-ಫ್ಲೈ ಜೋನ್’ (No-Fly Zone) ಡಿಕ್ಲೇರ್ ಮಾಡಲು ಮನವಿ ಮಾಡಿದೆ. ದೇವಸ್ಥಾನದ ಪಾವಿತ್ರ್ಯತೆ ಹಾಗೂ ಧಾರ್ಮಿಕ ಪರಂಪರೆ ಕಾಪಾಡಿಕೊಳ್ಳಲು ಇದು ಅವಶ್ಯಕ ಎಂದು ಆಡಳಿತ ಮಂಡಳಿ ಹೇಳಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!