ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದಾಗಿನಿಂದ ಸಾವಿರಾರು ಮಂದಿ ಭಕ್ತರು ಪ್ರತಿನಿತ್ಯ ಭೇಟಿ ಕೊಡುತ್ತಿದ್ದಾರೆ. ಇದೀಗ ಪಾಕಿಸ್ತಾನದಿಂದಲೂ ಇಂದು ಬಾಲರಾಮನ ದರ್ಶನ ಪಡೆಯಲು ಬರುತ್ತಿದ್ದಾರೆ.
ಪಾಕಿಸ್ತಾನದ ಸಿಂಧಿ ಸಮುದಾಯದ 200 ಸದಸ್ಯರ ನಿಯೋಗ ಇಂದು ಅಯೋಧ್ಯೆಗೆ ತಲುಪಿ ಬಾಲರಾಮನಿಗೆ ಪೂಜೆ ಸಲ್ಲಿಸಲಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಈ ನಿಯೋಗವು ಭಾರತಕ್ಕೆ ಒಂದು ತಿಂಗಳ ಧಾರ್ಮಿಕ ಪ್ರವಾಸದಲ್ಲಿದೆ. ಇದೀಗ ರಸ್ತೆ ಮಾರ್ಗವಾಗಿ ಇಂದು ಪ್ರಯಾಗ್‌ರಾಜ್‌ನಿಂದ ಅಯೋಧ್ಯೆಗೆ ತಲುಪಲಿದೆ.