ಇಂದು ಕಾರ್ತಿಕ ಪೌರ್ಣಮಿ: ಭಕ್ತರಿಂದ ಕಿಕ್ಕಿರಿದ ಶಿವ ಕ್ಷೇತ್ರಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಕಾರ್ತಿಕ ಪೌರ್ಣಮಿಯ ಪುಣ್ಯದಿನ. ಶಿವಭಕ್ತರು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಸೂರ್ಯೋದಯಕ್ಕೂ ಮುನ್ನ ದೀಪಾರಾಧನೆ ಮಾಡುತ್ತಾರೆ. ದೇಶದ ಹಲವು ಶೈವ ಕ್ಷೇತ್ರಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಕಾರ್ತಿಕ ಹುಣ್ಣಿಮೆಯ ಎರಡನೇ ಸೋಮವಾರದಂದು ಪ್ರಸಿದ್ಧ  ಶೈವ ಕ್ಷೇತ್ರ ಶ್ರೀಶೈಲದ ಪಾತಾಳಗಂಗೆಯಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ.

ಗಂಗಾಧರ ಮಂಟಪ, ಉತ್ತರ ಶಿವಮಾದ ಬೀದಿಯಲ್ಲಿ ಕಾರ್ತಿಕ ದೀಪಗಳು ಬೆಳಗುತ್ತಿವೆ. ಭಕ್ತಾದಿಗಳ ನೂಕುನುಗ್ಗಲು ಹಿನ್ನೆಲೆಯಲ್ಲಿ ಎಲ್ಲ ಭಕ್ತರಿಗೂ ಸರತಿ ಸಾಲಿನಲ್ಲಿ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಶಿವಕ್ಷೇತ್ರಗಳೂ ಶಿವನಾಮಗಳಿಂದ ಮೊಳಗುತ್ತಿದೆ.

ಶ್ರೀಶೈಲವಲ್ಲದೆ, ಇತರ ದೇವಾಲಯಗಳಲ್ಲಿ ಇಂದು ಮುಂಜಾನೆಯಿಂದಲೇ ಭಕ್ತರು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಉಜ್ಜಯನಿಯ ಮಹಾಕಾಳ, ಕರ್ನಾಟಕದ ಶ್ರೀ ಮುರುಡೇಶ್ವರ, ಧರ್ಮಸ್ಥಳದ ಮಂಜುನಾಥ ಸ್ವಾಮಿ, ವಾರಂಗಲ್ ಭದ್ರಕಾಳಿ, ದ್ವಾರಕಾತಿರುಮಲ, ಭದ್ರಾಚಲಂ ಸೇರಿದಂತೆ ಚಿಕ್ಕ-ದೊಡ್ಡ ದೇವಾಲಯಗಳ ಬಳಿ ಜನಜಂಗುಳಿಯಿಂದ ಕೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!