ರಾಮಲಲಾ ದರುಶನಕ್ಕೆ ಮುಗಿಬಿದ್ದ ಭಕ್ತರು, ನೂಕು ನುಗ್ಗಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನಿಂದ ಅಯೋಧ್ಯೆಯಲ್ಲಿ ಶ್ರೀರಾಮನ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಲೋಕಾರ್ಪಣೆಯ ಮೊದಲ ದಿನವೇ ಅಯೋಧ್ಯೆಯಲ್ಲಿ ಭಕ್ತರು ಗುಂಪು ಗುಂಪಾಗಿ ಆಗಮಿಸಿದ್ದು, ನಿಯಂತ್ರಣವೇ ಕಷ್ಟವಾಗುತ್ತಿದೆ. ಬೆಳಗ್ಗೆ 7 ಗಂಟೆಗೆ ತೆರೆಯುವ ದೇಗುಲಕ್ಕೆ ಜನರು 3 ಗಂಟೆಗೇ ಬಂದು ಕಾದು ಕುಳಿತಿದ್ದಾರೆ.

ಬೆಳಗ್ಗೆ ಏಳರಿಂದ 11:30 ರವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ದೇಗುಲದಲ್ಲಿ ರಾಮನ ದರುಶನಕ್ಕೆ ಅವಕಾಶವಿದೆ. ಸಂಜೆ 6:30 ಕ್ಕೆ ವಿಶೇಷ ಭಜನೆ, ಶೃಂಗಾರ ಆರತಿ ನಡೆಯಲಿದ್ದು, ಇದನ್ನು ವೀಕ್ಷಿಸಲು ಇಚ್ಛಿಸುವವರು ಒಂದು ದಿನ ಮುನ್ನವೇ ಸ್ಥಳವನ್ನು ಕಾಯ್ದಿರಿಸಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!