ಗವಿಸಿದ್ದೇಶ್ವರನಿಗೆ ಪಾದಯಾತ್ರೆ ಮೂಲಕ ಹರಕೆ ತೀರಿಸಿದ ಭಕ್ತರು!

ಹೊಸದಿಗಂತ ವರದಿ ಕೊಪ್ಪಳ:

ಗವಿಸಿದ್ದೇಶ್ವರ ಜಾತ್ರೋತ್ಸವ ಹಿನ್ನೆಲೆ ಭಕ್ತರು ದೂರದ ಊರುಗಳಿಂದ ಕೊಪ್ಪಳದ ಗವಿಮಠದ ವರೆಗೆ ಪಾದಯಾತ್ರೆ ಮೂಲಕ ಹರಿಕೆ ತೀರಿಸುತ್ತಿದ್ದಾರೆ.

ಭಾನುವಾರ ಬೆಳಗ್ಗೆ 1 ಗಂಟೆಯಿಂದಲೇ ಗಂಗಾವತಿ, ಮುಕ್ಕುಂಪಿ, ಹೇಮಗುಡ್ಡ, ಜಬ್ಬಲಗುಡ್ಡ, ಬೂದಗುಂಪ, ಗುಳದಾಳ, ಗಿಣಗೇರಾ, ಕುಕನೂರು, ಇಲಕಲ್‌ಗಡ, ಮರಡಿ, ಯಲಬುರ್ಗಾ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ಭಕ್ತರು ಪಾದಯಾತ್ರೆ ನಡೆಸಿದರು.
ಮಹಿಳೆಯರು, ವೃದ್ಧರು, ಮಕ್ಕಳು ಗವಿಸಿದ್ದೇಶ್ವರ ನನ್ನು ನೆನದು ಪಾದಯಾತ್ರೆ ನಡೆಸಿದರು. ಜನಪದ ಹಾಡು ಹಾಡುತ್ತಾ ರಸ್ತೆಯುದ್ದಕ್ಕೂ ಸಾಗಲು ದೃಶ್ಯ ಬೆಳ್ಳಂ ಬೆಳಗ್ಗೆ ಕಂಡು ಬಂದಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!