Saturday, March 25, 2023

Latest Posts

CINEMA| ಇಂದು ಪ್ರಪಂಚದಾದ್ಯಂತ ಧನುಷ್‌ ಸಿನಿಮಾ ರಿಲೀಸ್: ಟ್ವಿಟ್ಟರ್‌ನಲ್ಲಿ ʻಸರ್ʼ ಟ್ರೆಂಡಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಧನುಷ್ ಮತ್ತು ಸಂಯುಕ್ತ ನಾಯಕ-ನಾಯಕಿಯರಾಗಿ ನಟಿಸಿದ ʻಸರ್‌ʼ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ದ್ವಿಭಾಷೆಯಲ್ಲಿ ತಯಾರಾಗಿದೆ. ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾದಾಗಿನಿಂದ, ಚಿತ್ರವು ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಎರಡೂ ರಾಜ್ಯಗಳಲ್ಲಿ ಸಿನಿಮಾ ಪ್ರಚಾರವೂ ಅದ್ಧೂರಿಯಾಗಿ ನಡೆದಿದೆ. ಫೆಬ್ರವರಿ 17 ಇಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು,  ಸರ್ ಚಿತ್ರದ ಮೇಲಿನ ವಿಶ್ವಾಸದಿಂದ ತೆಲುಗು, ತಮಿಳು ರಾಜ್ಯಗಳಲ್ಲಿ ಕೆಲವೆಡೆ ಹಿಂದಿನ ರಾತ್ರಿಯೇ ಪ್ರೀಮಿಯರ್ ಶೋಗಳು ನಡೆದಿವೆ.

ಇದು ಶಿಕ್ಷಣದ ಮೌಲ್ಯವನ್ನಾಧಿರಿಸಿದ ಸಿನಿಮಾ ಆಗಿದ್ದು, ಕಮರ್ಷಿಯಲ್ ಅಂಶಗಳನ್ನೂ ಹೊಂದಿದೆ. ಪ್ರೀಮಿಯರ್ ಶೋನಿಂದಲೇ ಚರ್ಚೆ ಜೋರಾಗಿ ಸಿನಿಮಾ ನೋಡಿದವರೆಲ್ಲ ಇದೊಂದು ಅದ್ಬುತ ಸಿನಿಮಾವಾಗಿದ್ದು, ಭಾವನಾತ್ಮಕವಾಗಿ ಕನೆಕ್ಟ್ ಆಗಲಿದೆ ಅಂತಿದಾರೆ. ಸಿನಿಮಾ ಇಷ್ಟಪಟ್ಟವರೆಲ್ಲ ಟ್ವಿಟ್ಟರ್ ನಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೇ ಸರ್ ಸಿನಿಮಾ ಈಗ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. #sirmovie ಮತ್ತು #vaathi ಟ್ಯಾಗ್‌ಗಳು ಭಾರತದಾದ್ಯಂತ ಟ್ರೆಂಡಿಂಗ್ ಆಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!