ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಧರ್ಮ ಕೀರ್ತಿರಾಜ್ ಅವರು ಕೂಡ ಎಂಟ್ರಿಕೊಟ್ಟಿದ್ದಾರೆ.
ಹಲವು ವರ್ಷಗಳಿಂದ ಧರ್ಮ ಕೀರ್ತಿ ರಾಜ್ ಅವರು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಅವರ ತಂದೆ ಕೀರ್ತಿರಾಜ್ ಸ್ಯಾಂಡಲ್ವುಡ್ನಲ್ಲಿ ಫೇಮಸ್ ವಿಲನ್. ಆದರೆ ಧರ್ಮ ಅವರು ಲವರ್ಬಾಯ್ ರೀತಿಯ ಪಾತ್ರಗಳಿಂದ ಜನಪ್ರಿಯತೆ ಪಡೆದರು. ‘ನವಗ್ರಹ’ ಸಿನಿಮಾದಲ್ಲಿ ಅವರು ಒಂದು ಮುಖ್ಯ ಪಾತ್ರ ಮಾಡಿದರು. ಅದರಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ದರ್ಶನ್ ಆಪ್ತ ಬಳಗದಲ್ಲಿ ಧರ್ಮ ಕೀರ್ತಿರಾಜ್ ಗುರುತಿಸಿಕೊಂಡರು.
‘ನವಗ್ರಹ’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಅವರು ಶರ್ಮಿಳಾ ಮಾಂಡ್ರೆ ಜೊತೆ ಜೋಡಿಯಾಗಿ ನಟಿಸಿದರು. ‘ಕಣ್ ಕಣ್ಣ ಸಲಿಗೆ..’ ಹಾಡಿನಲ್ಲಿ ಅವರಿಬ್ಬರ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟ ಆಯಿತು. ಇಂದಿಗೂ ಆ ಹಾಡು ಟ್ರೆಂಡ್ನಲ್ಲಿದೆ.
ನಟಿ ಅನುಷಾ ರೈ ಎಂಟ್ರಿ
ಕೀರ್ತಿರಾಜ್ ಜೊತೆ ಯುವ ನಟಿ ಅನುಷಾ ರೈ ಎಂಟ್ರಿಕೊಟ್ಟಿದ್ದಾರೆ. ಗ್ರ್ಯಾಂಡ್ ಓಪನಿಂಗ್ ಕೊಟ್ಟ ನಟಿ ಅನುಷಾ ರೈ ಅವರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಖುಷಿ ಹಾಗೂ ಡಬಲ್ ಶಾಕ್ ಸಿಕ್ಕಿದೆ.
ಅನುಷಾ ರೈ ಹಾಗೂ ಧರ್ಮ ಕೀರ್ತಿ ರಾಜ್ ಅವರ ಮೊದಲೇ ಸ್ನೇಹಿತರು. ಈಗ ಈ ಬೆಸ್ಟ್ ಫ್ರೆಂಡ್ಸ್ ಬಿಗ್ ಬಾಸ್ ಮನೆಯಲ್ಲಿ ಒಂದಾಗಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಟ್ವಿಸ್ಟ್ ನೀಡಲಾಗಿದೆ. ಅನುಷಾ ರೈ ಅವರು ನಾನು ಮೊದಲು ಸ್ವರ್ಗಕ್ಕೆ ಹೋಗಬೇಕು ಎಂದಿದ್ದರು. ಆದರೆ ಭವ್ಯಾ ಗೌಡ ಹಾಗೂ ಯಮುನಾ ಅವರ ನಿರ್ಧಾರದ ಮೇಲೆ ಅನುಷಾ ರೈ ಅವರು ನರಕಕ್ಕೆ ಹೋಗಿದ್ದಾರೆ. ಧರ್ಮ ಕೀರ್ತಿ ರಾಜ್ ಸ್ವರ್ಗಕ್ಕೆ ಕಾಲಿಟ್ಟಿದ್ದಾರೆ.