ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ದಸರಾ ಬಂದರೆ ಮೈಸೂರಿನಲ್ಲಿ ಒಂದಿಲ್ಲೊಂದು ವಿಚಾರಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚೆಗಷ್ಟೇ ಮಹಿಷಾ ದಸರಾ ಸಂಘರ್ಷವಾಗಿತ್ತು. ಇದೀಗ ಧರ್ಮ ದಂಗಲ್ ಶುರುವಾಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಗುಂಬಜ್ ಮಾದರಿ ದೀಪಾಲಂಕಾರದ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಅಳವಡಿಸಿರುವ ಹಸಿರು ಚಪ್ಪರದ ದೀಪಾಲಂಕಾರದ ಫೋಟೋವನ್ನು ಹಾಕಿ ಅದನ್ನು ಬದಲಿಸುವಂತೆ ಕೇಳಿಕೊಂಡಿದ್ದಾರೆ.
ಪ್ರತಿ ವರ್ಷ ಸಯ್ಯಾಜಿರಾವ್ ರಸ್ತೆಯಲ್ಲಿ ಚೆಸ್ಕಾಂನಿಂದ ಹಸಿರು ಚಪ್ಪರ ಅಳವಡಿಸಲಾಗುತ್ತದೆ. ನಾಳೆ ಸಂಜೆ ಸಚಿವ ಕೆ ಜೆ ಜಾರ್ಜ್ ಅವರು ಇಲ್ಲಿಂದಲೇ ದೀಪಾಲಂಕಾರ ಉದ್ಘಾಟನೆ ಮಾಡಲಿದ್ದಾರೆ.