ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನು ಭವಿಷ್ಯ ಇಂದು ಪ್ರಕಟವಾಗಲಿದೆ. ದರ್ಶನ್, ಪವಿತ್ರ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಈಗಾಗಲೇ ಆರೋಪಿಗಳ ಪರ ವಿರುದ್ಧ ವಾದ – ಪ್ರತಿವಾದ ಆಲಿಸಿರೋ ನ್ಯಾ. ವಿಶ್ವಜಿತ್ ಶೆಟ್ಟಿ ಪೀಠದಿಂದ ಮಧ್ಯಾಹ್ನ 2:30ರ ವೇಳೆಗೆ ತೀರ್ಪು ಹೊರಬೀಳಲಿದೆ.
ಏಳು ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯು ಡಿ.9ರಂದು ನ್ಯಾಯಾಲಯದಲ್ಲಿ ಕೊನೆಗೊಂಡಿತು. ನಂತರ ತಾತ್ಕಾಲಿಕ ಜಾಮೀನನ್ನು ಮುಂದಿನ ಸೂಚನೆಯವರೆಗೆ ವಿಸ್ತರಿಸಲಾಯಿತು.
ದರ್ಶನ್ ಜಾಮೀನು ಅರ್ಜಿ ತಿರಸ್ಕೃತಗೊಂಡರೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಗುಣಮುಖರಾಗಿ ಜೈಲಿಗೆ ಮರಳಬೇಕಾಗುತ್ತದೆ. ಜಾಮೀನಿನ ಮೇಲೆ ಬಿಡುಗಡೆಯಾದರೆ, ಚೇತರಿಸಿಕೊಂಡ ನಂತರ ಅವರು ತಮ್ಮ ಮನೆಗೆ ಮರಳುತ್ತಾರೆ.